ಕಾರವಾರ: ಜಿಲ್ಲಾ ಪಂಚಾಯತ್ ಅಭಿಲೇಖಾಲಯ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿ ಅಮೂಲ್ಯ ದಾಖಲೆಗಳು ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
Advertisement
ಕಾರವಾರದ ಎಂ.ಜಿ ರಸ್ತೆಯಲ್ಲಿರುವ ಜಿಲ್ಲಾ ಪಂಚಾಯತ್ ಅಭಿಲೇಖಾಲಯದಲ್ಲಿ ಇಂದು ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮೂರು ಅಂತಸ್ಥಿನ ಕಟ್ಟಡಕ್ಕೆ ಬೆಂಕಿ ವ್ಯಾಪಸಿದ್ದು, ಕಟ್ಟಡದ ಕೆಳಭಾಗದಲ್ಲಿ ಇದ್ದ ಪೀಠೋಪಕರಣಗಳು ಮತ್ತು ಕಚೇರಿಯ ದಾಖಲೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಇದನ್ನೂ ಓದಿ: ಭಾರೀ ಗಾತ್ರದ ನಾಗರಹಾವಿನ ರಕ್ಷಣೆ- ಐತಾಳರ ಕಾರ್ಯಾಚರಣೆ ಬಹಳ ರೋಚಕ
Advertisement
Advertisement
ಕೆಲಭಾಗದ ಎರಡು ಅಂತಸ್ಥಿನಲ್ಲಿ ಬೆಂಕಿ ಹೊತ್ತಿಕೊಂಡಂತೆ, ಕೆಲ ಸಮಯದಲ್ಲಿಯೇ ಮೂರನೇ ಅಂತಸ್ಥಿಗು ಬೆಂಕಿ ಆವರಿಸಿದ್ದು ಅಲ್ಪ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆ ಅಂದಾಜು 2 ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಪ್ರಿಯಾಂಗ ರವರು ಮಾಹಿತಿ ನೀಡಿದ್ದಾರೆ.
Advertisement