– ಕ್ಯಾನ್ಸರ್ ಪೀಡಿತ 60 ವರ್ಷದ ವೃದ್ಧೆ ಕೊರೊನಾ ಸ್ಪ್ರೆಡರ್
ಕೋಲಾರ: ಜಿಲ್ಲೆಯ ಅರ್.ಎಲ್.ಜಾಲಪ್ಪ ಆಸ್ಪತ್ರೆ ಕೊರೊನಾ ಹಾಟ್ ಸ್ಪಾಟ್ ಆಗಿದ್ದು, ಕೇವಲ ಈ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿ 14 ಜನರಲ್ಲಿ ಕೊರೊನಾ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸೊಂಕಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ವೈದ್ಯರಿಗೂ ಮಹಾಮಾರಿ ವಕ್ಕರಿಸಿದ್ದು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಭಯಭೀತರನ್ನಾಗಿಸಿದೆ. ಜಿಲ್ಲೆಯಲ್ಲಿ ಈ ವರೆಗೆ 74 ಜನ ಸೋಂಕಿತರ ಪೈಕಿ, ಜಾಲಪ್ಪ ಆಸ್ಪತ್ರೆಯಲ್ಲಿಯೇ 14 ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ.
Advertisement
Advertisement
ಆಶ್ಚರ್ಯಕರ ರೀತಿಯಲ್ಲಿ ಜಾಲಪ್ಪ ಆಸ್ಪತ್ರೆಯ ಸಿಬ್ಬಂದಿಗೆ ಸೋಂಕು ತಗುಲಿದ್ದು, ಇದೆ ತಿಂಗಳು 18 ರಂದು ಅತಿಯಾದ ಹೊಟ್ಟೆನೋವಿನಿಂದ ತುರ್ತು ಚಿಕಿತ್ಸೆಗೆಂದು ಕೋಲಾರ ತಾಲೂಕು ಗುರ್ಜೇನಹಳ್ಳಿ ಗ್ರಾಮದ 60 ವರ್ಷದ ಮಹಿಳೆ ರೋಗಿ ನಂ.8810 ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಶಸ್ತ್ರ ಚಿಕಿತ್ಸೆ ನೀಡಿದ ಬಳಿಕ ಮಹಿಳೆಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಮಹಿಳೆಗೆ ಕೊರೊನಾ ತಗುಲಿರುವುದು ದೃಢವಾಗಿತ್ತು.
Advertisement
ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿದ್ದ 6 ಜನ ವೈದ್ಯರಿಗೂ ಕೊರೊನಾ ಪಾಸಿಟೀವ್ ಬಂದಿದ್ದು, ಇಡೀ ಆಸ್ಪತ್ರೆಯ ಸಿಬ್ಬಂದಿಯನ್ನು ಆತಂಕಕ್ಕೆ ದೂಡಿತ್ತು. ನಂತರ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಕೋವಿಡ್-19 ಟೆಸ್ಟ್‍ಗೆ ಒಳಪಡಿಸಲಾಗಿತ್ತು. ಎಲ್ಲರ ರಕ್ತದ ಹಾಗೂ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.
Advertisement
ಕಳೆದೊಂದು ವಾರದಿಂದ ಜಾಲಪ್ಪ ಆಸ್ಪತ್ರೆಯಲ್ಲಿ ಮಾತ್ರ 14 ಪ್ರಕರಣಗಳು ಕಾಣಿಸಿಕೊಂಡಿದೆ. ಕೋಲಾರದಲ್ಲಿ ಇಂದು ಎಂಟು ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಇದರಲ್ಲಿ ಜಾಲಪ್ಪ ಖಾಸಗಿ ಅಸ್ಪತ್ರೆಯ 7 ಸಿಬ್ಬಂದಿ ವೈದ್ಯರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
23 ವರ್ಷದ ಯುವತಿ ರೋಗಿ ನಂ.9538, 44 ವರ್ಷದ ಮಹಿಳೆ ರೋಗಿ ನಂ.9539, 33 ವರ್ಷದ ಮಹಿಳೆ ರೋಗಿ ನಂ.9540, 25 ವರ್ಷದ ಮಹಿಳೆ ರೋಗಿ ನಂ.9541, 23 ವರ್ಷದ ಮಹಿಳೆ ರೋಗಿ ನಂ.9542, 35 ವರ್ಷದ ಪುರುಷ ರೋಗಿ ನಂ.9543, 29 ವರ್ಷದ ಪುರುಷ ರೋಗಿ ನಂ.9545 ಇವರು ಜಾಲಪ್ಪ ಆಸ್ಪತ್ರೆ ಸಿಬ್ಬಂದಿಯಾಗಿದ್ದಾರೆ. ಉಳಿದಂತೆ 40 ವರ್ಷದ ಪುರುಷ ರೋಗಿ ನಂ.9544 ಮುಳಬಾಗಲು ತಾಲೂಕಿನ ವ್ಯಕ್ತಿಯಾಗಿದ್ದಾನೆ.
ಜಿಲ್ಲೆಯಲ್ಲಿ ಒಟ್ಟು 74 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 32 ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 42 ಸಕ್ರಿಯ ಪ್ರಕರಣಗಳಿವೆ.