ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬ್ಲ್ಯಾಕ್ ಮೇಲ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲ್ ಪಡೆದ ಆರೋಪಿಗಳಿಗೆ ಈಗ ನಡುಕ ಶುರುವಾಗಿದೆ. ಕೋರ್ಟ್ ನೀಡಿದ ಆದೇಶ ಪ್ರತಿಯಿಂದ ಗಾಬರಿಯಾಗಿರೋ ಆರೋಪಿಗಳು ತನಿಖಾಧಿಕಾರಿಯ ಮುಂದೆ ಹೋಗಬೇಕಾ ಎಂದು ಯೋಚಿಸುತ್ತಿದ್ದಾರೆ.
Advertisement
ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಕ್ಕರೂ ತನಿಖಾಧಿಕಾರಿಗೆ ಅಗತ್ಯ ಬಿದ್ದರೆ ಬಂಧಿಸಲು ಸ್ವತಂತ್ರ ನೀಡಿ ಕೋರ್ಟ್ ಆದೇಶವನ್ನು ನೀಡಿದೆ. ಈ ಮೂಲಕ ಜೂನ್ 12ರೊಳಗೆ ಬರಲು ಶುರುವಾಗಿದೆ ಭಯ. ಮತ್ತೊಂದೆಡೆ ತನಿಖಾಧಿಕಾರಿ ಮುಂದೆ ಹಾಜರಾಗಲೇ ಬೇಕು ಅಂದಿದೆ. ಇನ್ನೊಂದು ಕಡೆ ತನಿಖಾಧಿಕಾರಿಯ ಸ್ವತಂತ್ರವನ್ನು ನೀಡಿದೆ. ಈ ಎರಡು ವಿಚಾರಗಳಿಂದ ಗೊಂದಲದಲ್ಲಿ ಆರೋಪಿಗಳಾದ ನರೇಶ್ ಗೌಡ & ಶ್ರವಣ್ ವಿಚಾರಣೆಗೆ ಹಾಜರಾಗಬೇಕು ಅನ್ನೋ ಅನಿವಾರ್ಯ ಎದುರಾಗಿದೆ.
Advertisement
Advertisement
ವಿಚಾರಣೆಗೆ ಬರುವ ಆರೋಪಿಗಳ ವಿಚಾರಣೆಗೆ ತನಿಖಾಧಿಕಾರಿಗಳು ತಯಾರಿಯನ್ನು ನಡೆಸಿಕೊಂಡಿದ್ದಾರೆ. ತನಿಖಾಧಿಕಾರಿ ಧರ್ಮೇಂದ್ರ ಅವರಿಂದ ವಿಚಾರಣೆ ನಡೆಯಲಿದೆ ಮೊದಲ ದಿನ ಏನನ್ನು ಕೇಳಬೇಕು ಅಂತಾ ಎಸ್‍ಐಟಿ ರೆಡಿ ಮಾಡಿಕೊಂಡಿದೆ. ಇದನ್ನೂ ಓದಿ: ವೀಡಿಯೋಗಾಗಿ 15 ಕೋಟಿ ವೆಚ್ಚ, ಇದು ಹನಿಟ್ರ್ಯಾಪ್: ಬಾಲಚಂದ್ರ ಜಾರಕಿಹೊಳಿ
Advertisement
ರಮೇಶ್ ಜಾರಕಿಹೊಳಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುವ ಮುನ್ನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬ್ಲ್ಯಾಕ್‍ಮೇಲ್ ಕೇಸ್ ದಾಖಲು ಮಾಡಿದ್ರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‍ಐಟಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡದಂತೆ ಆಕ್ಷೇಪಣೆ ಸಲ್ಲಿಸಿತ್ತು. ಇದನ್ನೂ ಓದಿ: ಸಿಡಿ ಗ್ಯಾಂಗ್ – ವಿಚಾರಣೆಗೆ ಒಳಪಟ್ಟವರು ಯಾರು? ಆರೋಪ ಏನು?