ಚಿತ್ರದುರ್ಗ: ವ್ಯಕ್ತಿಯೊಬ್ಬರ ಕಾರಿಗೆ ಆಸಿಡ್ ದಾಳಿ ನಡೆಸಿ ಬೆಂಕಿ ಹಚ್ಚಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಸೂಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿರುವ ಜಮೀನನ್ನು ರಿಯಲ್ ಎಸ್ಟೇಟ್ ಉದ್ಯಮಿಯಾದ ಸುರೇಶ್‍ಗೆ ಮಾರಾಟ ಮಾಡಲು ವೇಣುಗೋಪಾಲ್ ಅವರ ತಂದೆ ಮುಂದಾಗಿದ್ದರು. ಆದರೆ ತಂದೆಯ ನಿರ್ಧಾರವನ್ನು ವಿರೋಧಿಸಿದ್ದರು. ಹೀಗೆ ಕೆಲಸದ ಮೇಲೆ ಅನ್ಯ ಕಾರ್ಯನಿಮಿತ್ತ ಚಳ್ಳಕೆರೆಗೆ ವೇಣುಗೋಪಾಲ್ ಬಂದಿದ್ದರು. ಈ ವೇಳೆ ಆಂಧ್ರ ಪ್ರದೇಶದಿಂದ ಹಿಂಬಾಲಿಸಿಕೊಂಡು ಬಂದಿರುವ ಸುರೇಶ್ ಅಂಡ್ ಟೀಂ, ಮೊಳಕಾಲ್ಮೂರಿನ ಸೂಕೆನಹಳ್ಳಿ ಬಳಿ ಏಕಾಏಕಿ ವೇಣುಗೋಪಾಲ್ ಕಾರಿಗೆ ಬೆಂಕಿ ಹಾಕಿ, ಆಸಿಡ್ ದಾಳಿಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೃತ್ಯವೆಸಗಲು ಮೊದಲೇ ಪೂರ್ವಸಿದ್ಧತೆ ಮಾಡಿಕೊಂಡಿರುವ ದುಷ್ಕರ್ಮಿಗಳು ಮೊಳಕಾಲ್ಮೂರಿನಿಂದ ವಾಪಾಸ್ ಹೊರಟ ವೇಣುಗೋಪಾಲ್ ಕಾರನ್ನು ಅಡ್ಡಗಟ್ಟಿ ಹತ್ಯೆಗೆ ಯತ್ನ ಮಾಡಲಾಗಿದೆ. ಆಂಧ್ರಪ್ರದೇಶ ರಾಜ್ಯದ ಹಿಂದುಪುರ ಮೂಲದ ಸುರೇಶ ಹಾಗೂ ಆತನ ಸಹಚರರಾದ ಆಂಜನೇಯ, ಚೌಡಪ್ಪ ಸೇರಿದಂತೆ ಐವರು ಈ ಕೃತ್ಯ ನಡೆಸಿದ್ದಾರೆಂಬ ಎಂದು ಹೇಳಲಾಗುತ್ತಿದೆ.
ದುಷ್ಕøತ್ಯದಿಂದಾಗಿ ವೇಣುಗೋಪಾಲ್ ಕಾರು ಸುಟ್ಟು ಸಂಪೂರ್ಣ ಭಸ್ಮವಾಗಿದ್ದು, ಗಂಭೀರವಾಗಿ ಗಾಯಗೊಂಡ ವೇಣುಗೋಪಾಲ್‍ರನ್ನು ಬಳ್ಳಾರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಕೃತ್ಯದ ಸ್ಥಳದಿಂದ ಪರಾರಿಯಾಗಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೃತ್ಯದ ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.