ಭೋಪಾಲ್: ಮಾವಿನ ಹಣ್ಣಿನ ಸೀಸನ್ ಮುಗಿಯುತ್ತಾ ಬಂತು ಹೀಗಿರುವಾಗ ಮಧ್ಯಪ್ರದೇಶದಲ್ಲಿನ ವಿಶಿಷ್ಟ ತಳಿಯ ಮಾವಿನ ಮರ ಈಗ ಫಸಲು ನೀಡಲು ಆರಂಭಿಸಿದೆ. ಆದರೆ ಒಂದು ಮಾವಿನಹಣ್ಣಿ ಬೆಲೆಯನ್ನು ಕೇಳಿದರೆ ಖಂಡಿತ ಆಶರ್ಯವಾಗಲಿದೆ.
Advertisement
ಗುಜರಾತ್ ಗಡಿಯಲ್ಲಿರುವ ಅಲಿರಜ್‍ಪುರ ಜಿಲ್ಲೆಯ ಕಥ್ಥಿವಾಡ ಪ್ರದೇಶದಲ್ಲಿ ಮಾತ್ರ ಬೆಳೆಯವ ಈ ಫಸಲು ನೂರ್ ಜಹಾನ್ ಮಾವಿನಕಾಯಿ ಎಂದೇ ಪ್ರಸಿದ್ಧವಾಗಿದೆ. ಒಂದು ಡಜನ್ ಮಾವಿನಹಣ್ಣು ಖರಿದೀಸುವ ಹಣದಲ್ಲಿ ಒಂದೇ ನೂರ್ ಜಹಾನ್ ಹಣ್ಣು ಮಾರಾಟವಾಗುತ್ತಿದೆ. ಒಂದು ಹಣ್ಣಿಗೆ 500 ರಿಂದ 1ಸಾವಿರ ರೂಪಾಯಿಗಳವರೆಗೆ ಹಣ್ಣು ಮಾರಾಟವಾಗುತ್ತದೆ. ಇದನ್ನೂ ಓದಿ: ರಶ್ಮಿಕಾ ಬಗ್ಗೆ ಕಮೆಂಟ್ ಮಾಡಿದವರ ಚಳಿ ಬಿಡಿಸಿದ ರಕ್ಷಿತ್ ಶೆಟ್ಟಿ
Advertisement
Advertisement
ಹಣ್ಣಿನ ಗಾತ್ರ ಉಳಿದ ಮಾವಿನಹಣ್ಣುಗಳಿಗೆ ಹೊಲಿಸಿದರೆ ತುಂಬಾ ದೊಡ್ಡದ್ದಾಗಿರುತ್ತದೆ. ಒಂದು ಅಡಿಗೂ ಹೆಚ್ಚು ಉದ್ದ ಬೆಳೆಯವ ಈ ಮಾವಿನಹಣ್ಣು 2 ರಿಂದ 3.5 ಕೆಜಿಗಳಷ್ಟು ತೂಕ ಹೊಂದಿರುತ್ತದೆ.
Advertisement
ನನ್ನ ತೋಟದಲ್ಲಿರುವ ಮೂರು ನೂರ್ ಜಹಾನ್ ಮಾವಿನಮರಗಳಲ್ಲಿ 250 ಹಣ್ಣುಗಳು ಬೆಳದಿವೆ. ಸಾಮಾನ್ಯವಾಗಿ ಜನವರಿ-ಫೆಬ್ರುವರಿಯಲ್ಲಿ ಹೂವು ಬಿಡಲು ಆರಂಭಿಸಿ, ಜೂನ್ ತಿಂಗಳು ಶುರುವಾದಂತೆ ಹಣ್ಣು ನೀಡುತ್ತವೆ. ಈ ಹಣ್ಣುಗಳಿಗಾಗಿ ಮುಂಗಡ ಬುಕಿಂಗ್ ಆಗಲೇ ಆರಂಭವಾಗಿದೆ. ಮಧ್ಯಪ್ರದೇಶ ಮತ್ತು ಗುಜರಾತ್ ಜನರೇ ಈ ಹಣ್ಣಿಗೆ ಬೇಡಿಕೆ ಇದೆ ಎಂದು ಕತ್ಥಿವಾಡದ ರೈತ ಶುವರಾಜ್ ಸಿಂಗ್ ಜಾಧವ್ ಹೇಳಿದ್ದಾರೆ.
ಕಳೆದ ಬಾರಿಗಿಂತ ಈ ವರ್ಷ ಫಸಲು ಚೆನ್ನಾಗಿ ಬಂದಿದ್ದರೂ, ಕೊರೊನಾದಿಂದಾಗಿ ವ್ಯಪಾರಕ್ಕೆ ಹೊಡೆತ ಬೀಳಬಹುದು. 2019ರಲ್ಲಿ ನಮ್ಮ ತೋಟದಲ್ಲಿ ಒಂದೊಂದು ನೂರ್ ಜಹಾನ್ ಮಾವಿನಹಣ್ಣು ಸರಿಸುಮಾರು 2.75 ಕೆಜಿ ಬೆಳೆದಿದ್ದವು. ಒಂದು ಮಾವಿನ ಹಣ್ಣಿಗೆ 1,200 ರೂಪಾಯಿಗೆ ಮಾರಾಟ ಮಾಡಿದ್ದೇನೆ ಎಂದು ಮತ್ತೊಬ್ಬ ನೂರ್ ಜಹಾನ್ ಹಣ್ಣಿನ ಬೆಳೆಗಾರರು ಹೇಳಿದ್ದಾರೆ.