ಜಮ್ಮು ಕಾಶ್ಮೀರದಿಂದ 4ನೇ ಆಟಗಾರ ಐಪಿಎಲ್‍ಗೆ ಎಂಟ್ರಿ – ಯಾರು ಈ ಸಮದ್?

Public TV
2 Min Read
Abdul Samad

ಶ್ರೀನಗರ: ದೇಶದ ಅವಿಭಾಜ್ಯ ಅಂಗವಾಗಿರುವ ಜುಮ್ಮು-ಕಾಶ್ಮೀರದಿಂದ ಬಹಳ ಕಡಿಮೆ ಆಟಗಾರರು ಐಪಿಎಲ್ ಆಡಿದ್ದಾರೆ. ಇಲ್ಲಿಯವರೆಗೂ ಐಪಿಎಲ್‍ನಲ್ಲಿ ಕೇವಲ ನಾಲ್ಕು ಮಂದಿ ಮಾತ್ರ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಜಮ್ಮು-ಕಾಶ್ಮೀರದ ಪರವಾಗಿ ಮೊದಲ ಬಾರಿಗೆ ಐಪಿಎಲ್ ಆಡಿದ ಖ್ಯಾತಿ ಪರ್ವೇಜ್ ರಸೂಲ್ ಅವರಿಗೆ ಸಲ್ಲುತ್ತದೆ. ಇದಾದ ನಂತರ ಎರಡನೇ ಪ್ಲೇಯರ್ ಆಗಿ ಮಂಜೂರ್ ದಾರ್ ಆಡಿದ್ದಾರೆ. ಮೂರನೇ ಆಟಗಾರನಾಗಿ ರಸಿಖ್ ಸಲಾಮ್ ದಾರ್ ಆಡಿದ್ದಾರೆ. ಜೊತೆಗೆ ನಾಲ್ಕನೇ ಆಟಗಾರನಾಗಿ ಅಬ್ದುಲ್ ಸಮದ್ ಬ್ಯಾಟ್ ಬೀಸುತ್ತಿದ್ದಾರೆ.

ipl 1

ಪರ್ವೇಜ್ ರಸೂಲ್: ಪರ್ವೇಜ್ ರಸೂಲ್ ಐಪಿಎಲ್ ಆಡಿದ ಮೊದಲ ಜಮ್ಮು-ಕಾಶ್ಮೀರದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರನ್ನು 2014ರಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ 95 ಲಕ್ಷ ನೀಡಿ ಖರೀದಿ ಮಾಡಿತ್ತು. ನಂತರ ಇವರು ಪುಣೆ ವಾರಿಯರ್ಸ್, ಸನ್‍ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಐಪಿಎಲ್ ಆಡಿದ್ದಾರೆ. 11 ಐಪಿಎಲ್ ಪಂದ್ಯಗಳನ್ನು ಆಡಿರುವ ಪರ್ವೇಜ್ ರಸೂಲ್ ಅವರು 4 ವಿಕೆಟ್ ಪಡೆದುಕೊಂಡು 271 ರನ್ ನೀಡಿದ್ದಾರೆ. ಜೊತೆಗೆ ಜಮ್ಮು-ಕಾಶ್ಮೀರ ದೇಶಿಯ ತಂಡ ಮತ್ತು ಇಂಡಿಯಾ-ಎ ತಂಡದ ಖಾಯಂ ಸದಸ್ಯರಾಗಿದ್ದಾರೆ.

parvez rasool

ಮಂಜೂರ್ ದಾರ್: ಮಜೂರ್ ದಾರ್ ಎರಡನೇ ಜಮ್ಮು-ಕಾಶ್ಮೀರದ ಆಟಗಾರನಾಗಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. ಇವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 2017ರ ಐಪಿಎಲ್ ವೇಳೆ ಇವರನ್ನು 20 ಲಕ್ಷ ಕೊಟ್ಟು ಖರೀದಿ ಮಾಡಿತ್ತು. ಆದರೆ ಆ ನಂತರ ಒಂದು ಪಂದ್ಯವನ್ನು ಆಡಿರಲಿಲ್ಲ. 2018ರಲ್ಲಿ ಮಂಜೂರ್ ದಾರ್ ಅವರನ್ನು ಪಂಜಾಬ್ ತಂಡ ಕೈಬಿಟ್ಟಿತ್ತು. ನಂತರ ಯಾವುದೇ ಐಪಿಎಲ್ ತಂಡ ಅವರನ್ನು ಖರೀದಿ ಮಾಡಿಲ್ಲ.

manzoor dar

ರಸಿಖ್ ಸಲಾಮ್ ದಾರ್: ರಸಿಖ್ ಸಲಾಮ್ ದಾರ್ ಅವರನ್ನು 2018ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಖರೀದಿ ಮಾಡಿತ್ತು. ಈ ಮೂಲಕ ಜಮ್ಮು-ಕಾಶ್ಮೀರದ ಮೂರನೇ ಪ್ಲೇಯರ್ ಆಗಿ ಸಲಾಮ್ ದಾರ್ ಐಪಿಎಲ್‍ಗೆ ಪಾದಾರ್ಪಾಣೆ ಮಾಡಿದ್ದರು. ಮುಂಬೈ ಇಂಡಿಯನ್ಸ್ ಪರ 2019ರಲ್ಲಿ ಒಂದು ಮ್ಯಾಚ್ ಆಡಿದ್ದರ ಸಲಾಮ್, ಆ ಪಂದ್ಯದಲ್ಲಿ ಉತ್ತಮವಾಗಿ ಆಡಿರಲಿಲ್ಲ. ಜೊತೆಗೆ ನಾಲ್ಕು ಓವರ್ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೇ 42 ರನ್ ಬಿಟ್ಟುಕೊಟ್ಟಿದ್ದರು.

rasikh salam dar

ಅಬ್ದುಲ್ ಸಮದ್: ಮಂಗಳವಾರ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅಬ್ದುಲ್ ಸಮದ್ ಅವರು ಐಪಿಎಲ್‍ಗೆ ಸನ್‍ರೈಸರ್ಸ್ ಹೈದರಾಬಾದ್ ಪರವಾಗಿ ಪಾದಾರ್ಪಣೆ ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಕೊನೆಯಲ್ಲಿ ಬ್ಯಾಟ್ ಮಾಡಿದ ಸಮದ್ 7 ಬಾಲಿಗೆ 12 ರನ್ ಸಿಡಿಸಿದರು. ಇವರನ್ನು 2019ರ ಐಪಿಎಲ್ ಹಾರಾಜು ಪ್ರಕ್ರಿಯೆಯಲ್ಲಿ 20 ಲಕ್ಷ ಕೊಟ್ಟು ಹೈದರಾಬಾದ್ ತಂಡ ಖರೀದಿ ಮಾಡಿತ್ತು. ಜೊತೆಗೆ ಇವರು ಜಮ್ಮು-ಕಾಶ್ಮೀರ ತಂಡ ಉತ್ತಮ ಆಲ್‍ರೌಂಡರ್ ಆಗಿದ್ದು, 10 ದೇಶೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಇದರಲ್ಲಿ ಬರೋಬ್ಬರಿ 529 ರನ್ ಸಿಡಿಸಿ ಮಿಂಚಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *