ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸಂಚಾರಿ ವಿಜಯ್ ಅವರು ಮಾನವೀಯತೆಯ ಕಾರ್ಯಗಳನ್ನು ನೆನೆದು ನವರಸ ನಾಯಕ ಜಗ್ಗೇಶ್ ಅವರು ಕಣ್ಣೀರು ಹಾಕಿದ್ದಾರೆ.
ಸಂಚಾರಿ ವಿಜಯ್ ಅಮೋಘ ಅಭಿಯನದಿಂದ ಕನ್ನಡಿಗರ ಮನೆಮಾತಾಗಿದ್ದರು. ಲಾಕ್‍ಡೌನ್ ಸಮಯದಲ್ಲಿ ಉಸಿರು ಟೀಮ್ ಮೂಲಕ ಕೊರೊನಾ ಸಂಕಷ್ಟ ಸಮಯದಲ್ಲಿ ಅನೇಕ ಜನರಿಗೆ ನೆರವಾಗಿದ್ದರು. ಲಾಕ್‍ಡೌನ್ ಸಮಯದಲ್ಲಿ ಕಾರ್ ಮಾಡಿ ಜನರಿಗೆ ಸಹಾಯ ಮಡೋಣ ಎಂದಿದ್ದರು ಎಂದು ಜಗ್ಗೇಶ್ ಹೇಳಿದ್ದಾರೆ. ಇದನ್ನೂ ಓದಿ: ಕನ್ನಡಿಗರ ಮನಗೆದ್ದಿದ್ದ ನಟ- ಬೊಮ್ಮಾಯಿ ಕಂಬನಿ
ಭೀಕರ ರಸ್ತೆ ಅಪಘಾತದಲ್ಲಿ ಆಸ್ಪತ್ರೆಯಲ್ಲಿರುವ ವಿಜಯ್ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದಾರೆ. ಆಸ್ಪತ್ರೆಗೆ ಅನೇಕ ಸ್ಟಾರ್ ನಟರು ವಿಜಯ್ ನೋಡಲು ಬರುತ್ತಿದ್ದಾರೆ. ನಟ ಜಗ್ಗೇಶ್ ಕೂಡ ವಿಜಯ್ ನೋಡಲು ಆಸ್ಪತ್ರೆಗೆ ಬಂದಿದ್ರು. ಈ ವೇಳೆ ಲಾಕ್‍ಡೌನ್ ಸಮಯದಲ್ಲಿ ಸಂಚಾರಿ ವಿಜಯ್ ಗೆ ಕಾರಿನ ಇಎಂ ಐ ಕಟ್ಟೋಕೆ ಕಷ್ಟವಾಗಿತ್ತು. ಈ ವೇಳೆ ಸಹೋದರನ ಜೊತೆ 28 ಸಾವಿರ ಇಎಂಐ ಕಟ್ಟೋಕೆ ಕಷ್ಟ ಕಾರನ್ನು ಮಾರಿ ಬಿಡೋಣ. ಈ ದುಡ್ಡಿನಲ್ಲಿ ಜನ್ರಿಗೆ ಸಹಾಯ ಮಾಡೋಣ ಅಂದಿದ್ರಂತೆ. ಇಂತಹ ಉತ್ತಮ ಮನೋಭಾವ ವಿಜಯ್‍ದಾಗಿತ್ತು ಎಂದು ಹೇಳುತ್ತಾ ಜಗ್ಗೇಶ್ ಭಾವುಕರಾಗಿದ್ದಾರೆ. ಇದನ್ನೂ ಓದಿ: ಪ್ರತಿಭಾವಂತ ನಟ ಸಂಚಾರಿ ವಿಜಯ್ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ
ಸಂಚಾರಿ ವಿಜಯ್ ನಿಧನಕ್ಕೆ ಇಡೀ ಚಿತ್ರರಂಗ ಕಣ್ಣೀರು ಹಾಕುತ್ತಿದೆ. ಸೆಲೆಬ್ರಿಟಿಗಳು ಮಾತ್ರವಲ್ಲದೆ ರಾಜಕೀಯ ನಾಯಕರು ಕೂಡ ಕಂಬನಿ ಮಿಡಿಯುತ್ತಿದ್ದಾರೆ. ಅನೇಕರು ಆಸ್ಪತ್ರೆ ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಹಲವರು ಸೋಶಿಯಲ್ ಮೀಡಿಯಾ ಮೂಲಕವಾಗಿ ಕಂಬನಿ ಮೀಡಿಯುತ್ತಿದ್ದಾರೆ.