ನವದೆಹಲಿ: ಕೊರೊನಾ ರೂಪಾಂತರಿ ವೈರಸ್ ಹಿನ್ನೆಲೆ ಇಂಗ್ಲೆಂಡ್ ನಿಂದ ಆಗಮಿಸುವ ಎಲ್ಲ ವಿಮಾನ ಸೇವೆಯ ಜನವರಿ 7, 2021ರವರೆಗೆ ರದ್ದು ಮಾಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್‍ದೀಪ್ ಸಿಂಗ್ ಹೇಳಿದ್ದಾರೆ. ಈ ಮೊದಲು ಡಿಸೆಂಬರ್ 31ರವರೆಗೆ ವಿಮಾನ ಹಾರಾಟ ಬಂದು ಮಾಡಲಾಗಿತ್ತು. ಇದೀಗ ಆದೇಶವನ್ನ ಜನವರಿ 7ರವರೆಗೆ ವಿಸ್ತರಿಸಲಾಗಿದೆ.
Advertisement
ದೇಶದಲ್ಲಿ ಕೊರೊನಾ ರೂಪಾಂತರಿ ಸ್ಫೋಟಗೊಂಡಿದ್ದು, ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಮಂಗಳವಾರ ಏಳು ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇಂದು ಮತ್ತೆ 13 ಜನರಲ್ಲಿ ಹೊಸ ಸೋಂಕು ತಗುಲಿರೋದು ದೃಢವಾಗಿದೆ. ಉತ್ತರ ಪ್ರದೇಶ 1, ತೆಲಂಗಾಣ 2, ಕರ್ನಾಟಕ 7, ದೆಹಲಿ 9 ಮತ್ತು ಪಶ್ಚಿಮ ಬಂಗಾಳದ ಓರ್ವರಲ್ಲಿ ಬ್ರಿಟನ್ ವೈರಸ್ ಕಂಡು ಬಂದಿದೆ.
Advertisement
Advertisement
ನವೆಂಬರ್ 22ರಿಂದ ಡಿಸೆಂಬರ್ 22ರೊಳಗೆ ಸುಮಾರು 33 ಸಾವಿರ ಪ್ರಯಾಣಿಕರು ಭಾರತಕ್ಕೆ ಬಂದಿದ್ದಾರೆ. ಈ ಪ್ರಯಾಣಿಕರಲ್ಲಿ 114 ಜನರಿಗೆ ಕೊರೊನಾ ಸೋಂಕು ತಗುಲಿದೆ. ಎಲ್ಲರ ಸ್ಯಾಂಪಲ್ ಗಳನ್ನ ಜೀನೊಮ್ ಸೀಕ್ವೆನ್ಸ್ ಗೆ ರವಾನಿಸಲಾಗಿದೆ. ಪಾಸಿಟಿವ್ ಬಂದಿರೋ ಸೋಂಕಿತರು ಮತ್ತು ಅವರ ಸಂಪರ್ಕಿತರನ್ನ ಕ್ವಾರಂಟೈನ್ ಮಾಡಲಾಗಿದೆ.
Advertisement
A decision has been taken to extend the temporary suspension of flights to & from the United Kingdom till 7 January 2021: Union Civil Aviation Minister Hardeep Singh Puri pic.twitter.com/LgjsSSLxFM
— ANI (@ANI) December 30, 2020