ಜನರ ಮುಂದೆಯೇ ತಂದೆಯನ್ನು ನಡುರಸ್ತೆಯಲ್ಲೇ ಧರ-ಧರನೇ ಎಳೆದೊಯ್ದ ಮಕ್ಕಳು!

Public TV
1 Min Read
UP 4

– ಮಕ್ಕಳ ಕ್ರೂರ ವರ್ತನೆಯ ವಿಡಿಯೋ ವೈರಲ್

ಲಕ್ನೋ: ಜನರ ಮುಂದೆಯೇ ಅಣ್ಣ- ತಮ್ಮಂದಿರಿಬ್ಬರು ತಮ್ಮ ತಂದೆಗೆ ಥಳಿಸಿದ್ದಲ್ಲದೇ ರಸ್ತೆ ಮಧ್ಯೆಯೇ ಧರಧರನೇ ಎಳೆದೊಯ್ದ ವಿಲಕ್ಷಣ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಈ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ಮಕ್ಕಳು ತಮ್ಮ ತಂದೆಯನ್ನು ದಂಕೌರ್ ಪ್ರದೇಶದ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದನ್ನು ಸ್ಥಳೀಯ ನಿವಾಸಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಿದ್ದರು. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮಕ್ಕಳ ಕೃತ್ಯವನ್ನು ಜಾಲತಾಣಿಗರು ಖಂಡಿಸಿದ್ದಾರೆ.

UP 1 2

ತಂದೆ ಮೇಲೆ ರೌದ್ರನರ್ತನ ತೋರಿದ ಮಕ್ಕಳಿಬ್ಬರನ್ನು ಬಂಧಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ಬಗ್ಗೆ ತಿಳಿದುಕೊಂಡ ಬಳಿಕ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಡಿಯೋದಲ್ಲಿ ಆರೋಪಿಗಳಿಬ್ಬರು ತಮ್ಮ ತಂದೆಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ವೇಳೆ ಮಹಿಳೆಯೊಬ್ಬರು ಆರೋಪಿಗಳ ಜೊತೆ ಇದ್ದು, ಕಿರುಚುತ್ತಿರುವುದನ್ನು ಕೂಡ ಕೇಳಬಹುದಾಗಿದೆ. ಆದರೆ ಮಕ್ಕಳು ಯಾಕೆ ತಮ್ಮ ತಂದೆಯ ಮೇಲೆ ಕ್ರೂರತನ ಮೆರೆದಿದ್ದಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ.

UP 2 1

ಗೌತಮ್ ಬುದ್ಧ ನಗರದ ಸಂಕೌರ್ ನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಗಂಡು ಮಕ್ಕಳು ತಮ್ಮ ತಂದೆಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಂಡಿದ್ದೇವೆ. ಘಟನೆ ಸಂಬಂಧ ಇಬ್ಬರು ಮಕ್ಕಳನ್ನು ಬಂಧಿಸಲಾಗಿದೆ. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ನೊಯ್ಡಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Police Jeep 1 1 medium

Share This Article
Leave a Comment

Leave a Reply

Your email address will not be published. Required fields are marked *