– ಅಂತಿಮ ದರ್ಶನಕ್ಕಾಗಿ ಕಿಕ್ಕಿರಿದು ನೆರೆದ ಜನ
ಚೆನ್ನೈ: ಗಾನ ಗಾರುಡಿಗ ಎಸ್.ಪಿ ಬಾಲಸುಬ್ರಹ್ಮಣಂ ಅವರ ಅಂತ್ಯಸಂಸ್ಕಾರ ಇಂದು ಚೆನ್ನೈನ ರೆಡ್‍ಹಿಲ್ ಫಾರ್ಮ್ ಹೌಸ್‍ನಲ್ಲಿ ನಡೆಯಲಿದೆ.
ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂ ಫಾರ್ಮ್ ಹೌಸ್‍ನಲ್ಲಿ ಎಸ್‍ಪಿಬಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೂ ಸಾರ್ವಜನಿಕರು ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
Advertisement
Advertisement
ತಿರುವಳ್ಳೂರ್ ಎಸ್‍ಪಿ ಎಸ್‍ಪಿಬಿ ಅವರ ಅಂತ್ಯಸಂಸ್ಕಾರದ ಕುರಿತ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ. ತಮ್ಮ ನೆಚ್ಚಿನ ಹಾಡುಗಾರನ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಉಳಿದಂತೆ ಅಂತ್ಯಸಂಸ್ಕಾರ ನಡೆಯುವ ಫಾರ್ಮ್ ಹೌಸ್‍ಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಸದ್ಯ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರಿಗೆ ಮಾತ್ರ ಪ್ರವೇಶ ನೀಡಲಾಗಿದೆ.
Advertisement
Advertisement
ಕೊರೊನಾ ಸೋಂಕಿಗೆ ತುತ್ತಾಗಿದ್ದ ಎಸ್‍ಪಿಬಿ ಅವರು ಕಳೆದ 51 ದಿನಗಳಿಂದ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿನ ವಿರುದ್ಧ ಸಾವು ಬದುಕಿನ ಹೋರಾಟ ನಡೆಸಿದ್ದ ಅವರಿಗೆ ಚಿಕಿತ್ಸೆ ಬಳಿಕ ಕೊರೊನಾ ನೆಗೆಟಿವ್ ದೃಢವಾಗಿತ್ತು. ಆದರೆ ಶುಕ್ರವಾರ ಮಧ್ಯಾಹ್ನ 1.04ರ ವೇಳೆ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದರು.
Tamil Nadu: Mortal remains of singer SP Balasubrahmanyam brought to his farmhouse in Thamaraipakkam village of Thiruvallore district for the cremation ceremony.
SP Balasubrahmanyam passed away at a hospital in the city, today morning. pic.twitter.com/ES7xsNOOVC
— ANI (@ANI) September 25, 2020
ಎಸ್‍ಪಿಬಿ ನಿಧನದ ಹಿನ್ನೆಯಲ್ಲಿ ರಾಜ್ಯದಲ್ಲಿ ಶುಕ್ರವಾರ ಶೋಕಾಚರಣೆ ಆಚರಿಸಲಾಯಿತು. ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗಿತ್ತು. ವಿಧಾನಸಭಾ ಕಲಾಪದಲ್ಲೂ ದಿಗ್ಗಜ ಗಾಯಕನ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
Tamil Nadu Government has decided to accord state funeral with gun salute to singer SP Balasubrahmanyam who passed away today morning https://t.co/gXNk17Humd
— ANI (@ANI) September 25, 2020