-ಚೀನಾ ಜೊತೆಗಿನ ಎಲ್ಲ ವ್ಯಾಪಾರಕ್ಕೆ ಬ್ರೇಕ್
ನವದೆಹಲಿ: ಗಾಲ್ವಾನಾ ಕಣಿವೆ ಪ್ರದೇಶದಲ್ಲಿ ನಡೆದ ಭಾರತ ಮತ್ತು ಚೀನಾದ ನಡುವೆ ಸಂಘರ್ಷದ ಬಳಿಕ ದೇಶದಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಕೇಂದ್ರ ಸರ್ಕಾರ 59 ಚೀನಾ ಆ್ಯಪ್‍ಗಳನ್ನು ನಿಷೇಧಿಸಿದ ಬೆನ್ನಲ್ಲೆ ಉದ್ಯಮಿದಾರರು ಸಹ ವೈರಿ ರಾಷ್ಟ್ರದ ಜೊತೆಗಿನ ವ್ಯವಹಾರಿಕ ಸಂಬಂಧವನ್ನು ಕಡಿತಗೊಳಿಸಿಕೊಳ್ಳುತ್ತಿದ್ದಾರೆ. ಇದೀಗ ಹೀರೋ ಸೈಕಲ್ ಕಂಪನಿ ಚೀನಾ ಜೊತೆಗಿನ 900 ಕೋಟಿ ವ್ಯವಹಾರವನ್ನ ರದ್ದುಗೊಳಿಸಿದೆ.
Advertisement
ಸೈಕಲ್ ತಯಾರಿಕೆಗಾಗಿ ಹೀರೋ ಕಂಪನಿ ಬಿಡಿ ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಈಗ ಪಂಜಾಬ್ ರಾಜ್ಯದ ಲೂಧಿಯಾನದ ಸಣ್ಣ ಕಂಪನಿಗಳಿಂದ ಬಿಡಿ ಭಾಗಗಳನ್ನು ತರಿಸಿಕೊಳ್ಳಲು ಹೀರೋ ಕಂಪನಿ ನಿರ್ಧರಿಸಿದೆ. ಮುಂದಿನ ತಿಂಗಳ ಒಪ್ಪಂದವನ್ನು ರದ್ದು ಮಾಡಿಕೊಂಡಿದ್ದರಿಂದ ಚೀನಾಗೆ ಅಂದಾಜು 900 ಕೋಟಿ ರೂ. ನಷ್ಟ ಸಂಭವಿಸಲಿದೆ.
Advertisement
Advertisement
ಜರ್ಮಿನಿಯಲ್ಲಿ ಚೀನಾ ತನ್ನ ಸ್ಥಾವರ ಸ್ಥಾಪಿಸಲು ಮುಂದಾಗಿದೆ. ಜರ್ಮನಿಯನ್ನು ವ್ಯಾಪಾರದ ಕೇಂದ್ರ ಬಿಂದುವನ್ನಾಗಿ ಮಾಡಿಕೊಳ್ಳುವ ಮೂಲಕ ವಿಶ್ವದ ಮಾರುಕಟ್ಟೆಯನ್ನು ವ್ಯವಹರಿಸಲು ಕಂಪನಿ ಪ್ಲಾನ್ ಮಾಡಿಕೊಂಡಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಹೀರೋ ಕಂಪನಿ ಸರ್ಕಾರಕ್ಕೆ 100 ಕೋಟಿ ರೂ.ಯನ್ನು ದಾನವಾಗಿ ನೀಡಿತ್ತು.
Advertisement
ಚೀನಾದ 59 ಆ್ಯಪ್ ಮಾಡುವ ಮೂಲಕ ನೆರೆಯ ವೈರಿ ರಾಷ್ಟ್ರಕ್ಕೆ ಶಾಕ್ ನೀಡಿರುವ ಪ್ರಧಾನಿ ಮೋದಿ, ಮತ್ತೊಂದು ಹೆಜ್ಜೆಯನ್ನು ಇರಿಸಿದ್ದಾರೆ. ದೇಶದ ಯುವ ಪೀಳಿಗೆ ದೇಶಿಯ ಆ್ಯಪ್ ತಯಾರಿಸುವ ಮೂಲಕ ಆತ್ಮನಿರ್ಭರ ಭಾರತದ ಜೊತೆ ಕೈ ಜೋಡಿಸಿ ಎಂದು ಕರೆ ನೀಡಿದ್ದಾರೆ.