– ಶಸ್ತ್ರ, ದೊಡ್ಡ ಮೊಳೆಗಳ ರಾಡ್ ಹಿಡಿದು ನಿಂತಿರುವ ಚೀನಿ ಸೇನೆ
ಲೇಹ್: ಗಡಿ ವಾಸ್ತವ ರೇಖೆ(ಎಲ್‍ಎಸಿ) ಬಳಿ ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಚೀನಿ ಸೈನಿಕರು ಪುಂಡಾಟಿಕೆ ಮೆರೆಯುತ್ತಿದ್ದಾರೆ. ಇದೀಗ ಆಘಾತಕಾರಿ ಚಿತ್ರಗಳು ಸಿಕ್ಕಿದ್ದು, ಎಲ್‍ಎಸಿ ಉದ್ದಕ್ಕೂ ಚೀನಿ ಸೇನೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ದೊಡ್ಡ ಮಟ್ಟದ ಮೊಳೆಗಳನ್ನು ಹೊಂದಿರುವ ರಾಡ್‍ಗಳನ್ನು ಹಿಡಿದು ನಿಂತಿದೆ. ಈ ಚಿತ್ರಗಳು ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Advertisement
ಚೀನಿ ಸೈನಿಕರು ಎಲ್‍ಎಸಿಯುದ್ದಕ್ಕೂ ಶಸ್ತ್ರಾಸ್ತ್ರ ಹಾಗೂ ರಾಡ್‍ಗಳನ್ನು ಹಿಡಿದು ಪೂರ್ವ ಲಡಾಖ್ ಭಾಗದಲ್ಲಿ ಜಮಾವಣೆಯಾಗಿರುವ ಫೋಟೋಗಳು ಇದೀಗ ಲಭ್ಯವಾಗಿವೆ. ಭಾರತ ಹಾಗೂ ಚೀನಾ ಮಧ್ಯೆ ಗಡಿ ವಿಚಾರದಲ್ಲಿ ಹಲವು ಸಂಘರ್ಷಗಳ ಮಧ್ಯೆ ಇದೀಗ ಚಿತ್ರಗಳು ಸಿಕ್ಕಿವೆ.
Advertisement
ಚೀನಿ ಸೇನೆ ದೊಡ್ಡ ಪ್ರಮಾಣದ ಹರಿತವಾದ ಉಗುರು(ಮೊಳೆ)ಗಳುಳ್ಳ ರಾಡ್‍ಗಳನ್ನು ಹಿಡಿದು ನಿಂತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಬಂದೂಕು ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳಿರುವುದನ್ನು ಕಾಣಬಹುದಾಗಿದೆ. ಚೀನಾ ಕುತಂತ್ರ ನಡೆಸಲು ತಯಾರಿ ನಡೆಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ರಾಡ್‍ಗಳನ್ನು ಸಂಗ್ರಹಿಸುತ್ತಿದೆ. ಆದರೆ ಅವರು ಹತ್ತಿರ ಬಾರದಂತೆ ಭಾರತೀಯ ಸೇನೆ ಕಟ್ಟಿ ಹಾಕಿದೆ. ಹೀಗಾಗಿ ಗಲ್ವಾನ್ ವ್ಯಾಲಿಯಲ್ಲಿ ದಾಳಿ ಮಾಡಿದ ರೀತಿ ಮತ್ತೊಂದು ದಾಳಿ ನಡೆಸಲು ಚೀನಾ ಸಂಚು ರೂಪಿಸುತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
Advertisement
Advertisement
ಕಳೆದ ಜೂನ್‍ನಲ್ಲಿ ಗಲ್ವಾನ್ ವ್ಯಾಲಿಯಲ್ಲಿ ನಡೆದ ಘರ್ಷಣೆ ಸಂದರ್ಭದಲ್ಲಿ ಸಹ ಚೀನಾ ಸೈನಿಕರು ಇಂತಹದ್ದೇ ರಾಡ್‍ಗಳನ್ನು ಬಳಸಿದ್ದರು. ಚೀನಾ ಸೈನಿಕರ ದಾಳಿಯಿಂದಾಗಿ ಕರ್ನಲ್ ಸಂತೋಷ್ ಬಾಬು ಸೇರಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೆ ಭಾರತೀಯ ಸೈನಿಕರು ನಡೆಸಿದ ಪ್ರತಿ ದಾಳಿಗೆ ಚೀನಾದ ಹಲವು ಸೈನಿಕರು ಸಹ ಸಾವನ್ನಪ್ಪಿದ್ದರು. ಆದರೆ ಚೀನಾ ಈ ಕುರಿತು ಬಾಯ್ಬಿಟ್ಟಿರಲಿಲ್ಲ.
ಗಲ್ವಾನ್ ವ್ಯಾಲಿ, ಹಾಟ್ ಸ್ಪ್ರಿಂಗ್ಸ್ ಹಾಗೂ ಕೊಂಗ್ರಂಗ್ ನಾಲೆ ಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಚೀನಾ ಸೇನೆ ನಿಯಮ ಉಲ್ಲಂಘಿಸಿ ಅತಿಕ್ರಮಣ ಮಾಡುತ್ತಿದೆ. ಹೀಗಾಗಿ ಏಪ್ರಿಲ್-ಮೇ ತಿಂಗಳಿಂದ ಭಾರತ ಹಾಗೂ ಚೀನಾ ಮಧ್ಯೆ ಸಂಘರ್ಷ ನಡೆಯುತ್ತಿದೆ.