ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ತಮ್ಮ ಪತಿ ಚಿರುವನ್ನು ನೆನೆದು ಫ್ರೆಂಡ್‍ಶಿಪ್ ಡೇಗೆ ವಿಶೇಷ ಫೋಟೋವನ್ನು ಶೇರ್ ಮಾಡಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಜತೆ ಇರುವ ಫೋಟೋವನ್ನು ಮೇಘನಾ ಪೋಸ್ಟ್ ಮಾಡಿದ್ದಾರೆ. ನೀನು ಯಾವಾಗಲೂ ನನ್ನ ಉತ್ತಮ ಗೆಳೆಯ. ಹ್ಯಾಪಿ ಫ್ರೆಂಡ್‍ಶಿಪ್ ಡೇ ಎಂದು ಮೇಘನಾ ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋ ನೋಡಿದ ಅನೇಕ ಅಭಿಮಾನಿಗಳು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. ಕೆಲವರು ಚಿರು ಯಾವಾಗಲೂ ನಿಮ್ಮ ಜತೆ ಇರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಂದಿಬೆಟ್ಟದ ತಪ್ಪಲಲ್ಲಿ ರಾಜಾರೋಷವಾಗಿ ಪ್ರವಾಸಿಗರಿಂದ ಹುಕ್ಕಾ ಸೇವನೆ
View this post on Instagram
ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಆರಂಭದಲ್ಲಿ ಗೆಳೆಯರಾಗಿದ್ದರು. ನಂತರ ಇವರ ಮಧ್ಯೆ ಪ್ರೀತಿ ಮೊಳೆತಿತ್ತು. ಮದುವೆ ಆಗುವ ಮೂಲಕ ತಮ್ಮ ಪ್ರೀತಿಗೆ ಹೊಸ ಅರ್ಥ ಕೊಟ್ಟರು. ‘ಚಿರು ನನಗೆ ಪತಿ ಎನ್ನುವುದಕ್ಕಿಂತ ಅತ್ಯುತ್ತಮ ಗೆಳೆಯ’ ಎಂದು ಮೇಘನಾ ರಾಜ್ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ, ಪತಿ-ಪತ್ನಿ ಸಂಬಂಧದ ಜತೆಗೆ ಇವರ ನಡುವೆ ಒಳ್ಳೆಯ ಗೆಳೆತನವಿತ್ತು. ಚಿರು ಅವರಲ್ಲಿ ಓರ್ವ ಗೆಳೆಯನನ್ನು ಮೇಘನಾ ಕಂಡಿದ್ದರು. ಈ ಕಾರಣಕ್ಕೆ ಮೇಘನಾ ರಾಜ್ ಇಂದು ಪತಿಗೆ ಫ್ರೆಂಡ್‍ಶಿಪ್ ಡೇ ಶುಭಾಶಯ ಕೋರಿದ್ದಾರೆ.
View this post on Instagram
ಚಿರು ಇಹಲೋಕ ತ್ಯಜಿಸಿದ್ದರೂ ಮೇಘನಾ ರಾಜ್ ಅವರು ಒಂದಲ್ಲಾ ಒಂದು ರೀತಿಯಲ್ಲಿ ಪತಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇಂದು ಫ್ರೆಂಡ್‍ಶಿಪ್ ಡೇ. ಈ ವಿಶೇಷ ದಿನದಂದು ಮೇಘನಾ ಪತಿ ಚಿರಂಜೀವಿಯನ್ನು ನೆನಪಿಸಿಕೊಂಡಿದ್ದಾರೆ. ಮೇಘನಾ ಕೆಲವು ದಿನಗಳ ಹಿಂದೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದರು. ವರ್ಷಗಳ ನಂತರ ಕ್ಯಾಮೆರಾ ಎದುರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ.