ಬೆಂಗಳೂರು: ಜೀವನ ಇಷ್ಟೇ ಅನ್ನಿಸಿಬಿಡ್ತು, ಮಧ್ಯರಾತ್ರಿ 2 ಗಂಟೆಗೆಲ್ಲಾ ಮಾತನಾಡಿದ್ದೆವು. ಲೆಕ್ಕವಿಲ್ಲದಷ್ಟು ಒಳ್ಳೆಯ ವಿಚಾರಗಳನ್ನು ಹಂಚಿಕೊಂಡಿದ್ದೆವು ಎಂದು ಚೀರಂಜೀವಿಯವರೊಟ್ಟಿಗೆ ಕಳೆದ ದಿನಗಳನ್ನು ನಟ ಪ್ರಥಮ್ ಮೆಲುಕು ಹಾಕಿದ್ದಾರೆ.
ಈ ಕುರಿತು ಫೆಸ್ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಪ್ರಥಮ್, ಮೊನ್ನೆ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಹೇಳಿದ ಕೂಡಲೇ ಟ್ವೀಟ್ ಮಾಡಿದ್ದರು. ನಾಳೆ ಮೀಟ್ ಮಾಡೋದು ಕೂಡ ಇತ್ತು. ಆದರೆ ಈ ರೀತಿ ಭೇಟಿಯಾಗುತ್ತೇವೆ ಎಂದು ಗೊತ್ತಿರಲಿಲ್ಲ. ಚಿರು ನಮ್ಮ ಶಕ್ತಿಯಾಗಿದ್ದರು. ಇವತ್ತು ಅವರ ಅಗಲಿಕೆ ನನ್ನ ಅರ್ಧ ಶಕ್ತಿ ಸತ್ತುಹೋದಂತೆ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
ಅಲ್ಲದೆ ಮುಂದುವರಿದು 2020 ಕೇವಲ ಕೆಟ್ಟ ಕಾರಣಕ್ಕೆ ನೆನಪಿನಲ್ಲಿ ಉಳಿದು ಬಿಡ್ತು ಎಂದು ಬೇಸರ ಹೊರ ಹಾಕಿದ್ದಾರೆ. ಚಿರು ಅಕಾಲಿಕ ಮರಣಕ್ಕೆ ಇಡೀ ಸ್ಯಾಂಡಲ್‍ವುಡ್ ಕಂಬನಿ ಮಿಡಿದಿದ್ದು, ನಟ, ನಟಿಯರು ಅವರೊಟ್ಟಿಗೆ ಕಳೆದ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.