ಬೆಂಗಳೂರು: ಮಗನ ಬರ್ತ ಡೇ ಅಂಗವಾಗಿ ಬಿಗ್‍ಬಾಸ್‍ನ ಮಾಜಿ ಸ್ಪರ್ಧಿ ಧನರಾಜ್ ಚಿರತೆಯನ್ನು ದತ್ತು ಪಡೆದಿದ್ದಾರೆ.
ಸೀಸನ್ 6ರ ಸ್ಪರ್ಧಿ ಧನರಾಜ್ ಬಿಗ್‍ಬಾಸ್ ಟ್ರೋಫಿಯನ್ನು ಮಿಸ್ ಮಾಡಿಕೊಂಡಿದ್ದರು. ಆದರೆ ವೀಕ್ಷಕರ ಮನಸ್ಸಿನಲ್ಲಿ ಒಳ್ಳೆಯ ಅಭಿಪ್ರಾಯವನ್ನುಗಳಿಸಿಕೊಂಡಿದ್ದರು. ಇದೀಗ ಅವರು ಮಾಡಿರುವ ಕೆಲಸಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಧನರಾಜ್ ದಂಪತಿ ಮಗ ಅಗಸ್ತ್ಯನಿಗೆ ಒಂದು ವರ್ಷವಾಗಿರುವ ಸಂತೋಷದಲ್ಲಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಚಿರತೆಯೊಂದನ್ನು ದತ್ತು ಪಡೆದಿದ್ದಾರೆ.
View this post on Instagram
ನನ್ನ ಮಗನ ಮೊದಲನೇ ವರ್ಷದ ಹುಟ್ಟು ಹಬ್ಬಕ್ಕೆ ಒಂದು ಒಳ್ಳೆ ಅರ್ಥ ಸಿಗಲೆಂದು ಹಾಗೂ ಅವನ ಜೀವನದುದ್ದಕ್ಕೂ ನೆನಪಲ್ಲಿ ಇರಲೆಂದು ಚಿರತೆಯನ್ನು ದತ್ತು ಪಡೆದಿದ್ದೇವೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇಂದು ನನ್ನ ಮಗನ ಹೆಸರಲ್ಲಿ ಇಂಡಿಯನ್ ಲೆಫರ್ಡ್ ಅನ್ನು ಒಂದು ವರ್ಷಕ್ಕೆ ದತ್ತು ಪಡೆದಿದ್ದೇವೆ. ನಿಮ್ಮ ಆಶೀರ್ವಾದ ದೇವರ ಆಶೀರ್ವಾದ ಸದಾ ನನ್ನ ಮಗ ಅಗಸ್ತ್ಯನ ಮೇಲಿರಲಿ ಎಂದು ಬರೆದುಕೊಂಡು ಧನರಾಜ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಹುಟ್ಟುಹಬ್ಬದ ಪಾರ್ಟಿ ಮಾಡಿ ಏಂಜಾಯ್ ಮಾಡುತ್ತಾ ಹಣ ವ್ಯಯ ಮಾಡುವ ಬದಲಾಗಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿವ ಕೆಲಸವನ್ನು ಧನರಾಜ್ ಮಾಡಿದ್ದಾರೆ. ಸ್ಯಾಂಡಲ್‍ವುಡ್ ನಟ ದರ್ಶನ್ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯಿರಿ ಎಂದು ಮನವಿ ಮಾಡಿದ್ದರು. ಅನೇಕ ಸಲೆಬ್ರಿಟಿಗಳು, ಪ್ರಾಣಿ ಪ್ರಿಯರು ಪ್ರಾಣಿಗಳನ್ನು ದತ್ತು ಪಡೆದಿದ್ದರು. ಇದೀಗ ಮಹತ್ಕಾರ್ಯಕ್ಕೆ ಧನರಾಜ್ ಕೈ ಜೋಡಿಸುವ ಮೂಲಕವಾಗಿ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ.