ನವದೆಹಲಿ: ಕೋವಿಡ್ 19 ಸಮಯದಲ್ಲಿ ಏರಿಕೆ ಕಾಣುತ್ತಿದ್ದ ಚಿನ್ನದ ದರ ಈಗ ದಿಢೀರ್ ಭಾರೀ ಇಳಿಕೆ ಕಂಡಿದೆ.
ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನವೂ ಚಿನ್ನ, ಬೆಳಿ ದರದಲ್ಲಿ ಇಳಿಕೆ ಆಗಿದೆ. 10 ಗ್ರಾಂ ಚಿನ್ನದ ದರ ಬುಧವಾರ 650 ರೂ. ಇಳಿಕೆಯಾಗಿದ್ದರೆ ಗುರುವಾರ 1,492 ರೂ. ಇಳಿಕೆಯಾಗಿ 52,819 ರೂ.ನಲ್ಲಿ ಮಾರಾಟವಾಗಿದೆ.
ಬುಧವಾರ 1 ಕೆಜಿ ಬೆಳ್ಳಿ ದರ 3,112 ರೂ. ಇಳಿಕೆಯಾಗಿದ್ದರೆ ಗುರುವಾರ 1,476 ರೂ. ಇಳಿಕೆಯಾಗಿ 67,924 ರೂ. ನಲ್ಲಿ ಮಾರಾಟ ಕಂಡಿತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಕುಸಿದ ಕಾರಣ ದೇಶದಲ್ಲೂ ಚಿನ್ನ, ಬೆಳ್ಳಿ ದರ ಕಡಿಮೆಯಾಗಿದೆ. ಡಾಲರ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ ಚಿನ್ನದ ಬೆಲೆ ಭಾರತದಲ್ಲೂ ಕಡಿಮೆಯಾಗುತ್ತಿದೆ. ಇದನ್ನೂ ಓದಿ: ಭಾರತದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಚಿನ್ನ.. ದರ ಏರಿಕೆಗೆ ಕಾರಣ ಏನು?