– ಗಿಫ್ಟ್ ನೋಡಲು ಮನೆಗೆ ಮಹಿಳೆಯರ ದೌಡು!
– ವಜ್ರ, ಬ್ರ್ಯಾಂಡೆಡ್ ಬಟ್ಟೆಯಂತೂ ಅಲ್ಲವೇ ಅಲ್ಲ
ಪಾಟ್ನಾ: ಬಿಹಾರದ ಮೆಕ್ಯಾನಿಕಲ್ ಇಂಜಿನೀಯರ್ ಪತ್ನಿಗೆ ನೀಡಿರುವ ಕಾಣಿಕೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಇತ್ತ ಗಿಫ್ಟ್ ಪಡೆದ ಪತ್ನಿ ಫುಲ್ ಖುಷಿಯಾಗಿದ್ದು, ಮನೆಗೆ ಆಗಮಿಸುತ್ತಿರುವ ಗೆಳತಿಯರಿಗೆ ಪತಿ ನೀಡಿದ ಕಾಣಿಕೆಯನ್ನು ತೋರಿಸುತ್ತಿದ್ದಾರೆ.
Advertisement
ಅನುಜ್ ಕುಮಾರ್ ಗಿಫ್ಟ್ ನೀಡಿದ ಪತಿ. ಚಿನ್ನ, ಬೆಳ್ಳಿ, ವಜ್ರ ಮತ್ತು ಬ್ರ್ಯಾಂಡೆಡ್ ಬಟ್ಟೆ ಬದಲಾಗಿ ಪತ್ನಿಗೆ ಲಿಫ್ಟ್ ನೀಡಿದ್ದಾರೆ. ಈ ಲಿಫ್ಟ್ ಮೂಲಕವೇ ಪತ್ನಿ ಇದೀಗ ಊಟ, ತಿಂಡಿ, ಪಾನೀಯ ಕಳುಹಿಸುತ್ತಿದ್ದಾರೆ. ಇದರಿಂದ ಪತ್ನಿ ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಗೆ ಓಡಾಡೋದು ಕಡಿಮೆಯಾಗಿದೆ. ಇದರಿಂದ ಪತ್ನಿಯ ಆಯಾಸ ಕಡಿಮೆ ಮಾಡಿದ್ದಾರೆ. ಮನೆಯಲ್ಲಿಯೇ ಊಟ ಕಳಿಸುವ ಪುಟ್ಟ ಲಿಫ್ಟ್ ತಯಾರಿಸಿದ್ದಾರೆ. ಕಿಚನ್ ನಿಂದ ನೇರವಾಗಿ ಡೈನಿಂಗ್ ಹಾಲ್ ಗೆ ಊಟ ಕಳಿಸಬಹುದಾಗಿದೆ.
Advertisement
Advertisement
ಲಿಫ್ಟ್ ಗಿಫ್ಟ್ ನೀಡಿದ್ಯಾಕೆ?:
ಒಮ್ಮೆ ಮನೆಗೆ ಅತಿಥಿಗಳು ಬಂದಾಗ ಪತ್ನಿ ಒಳಗೂ, ಹೊರಗೂ ಓಡಾಡುತ್ತಿದ್ದಳು. ಮೆಟ್ಟಿಲುಗಳು ಹೆಚ್ಚಾಗಿರೋದರಿಂದ ಒಮ್ಮೆ ಪತ್ನಿ ಜಾರಿ ಬಿದ್ದು ಆಸ್ಪತ್ರೆ ಸೇರುವಂತಾಗಿದೆ. ಹಾಗಾಗಿ ಪತ್ನಿಯ ಶ್ರಮ ಕಡಿಮೆ ಮಾಡುವ ಉದ್ದೇಶದಿಂದ ಪುಟ್ಟ ಲಿಫ್ಟ್ ನಿರ್ಮಿಸುವ ಆಲೋಚನೆ ಬಂತು ರಂದು ಅನುಜ್ ಕುಮಾರ್ ಹೇಳುತ್ತಾರೆ.
Advertisement
ನಮ್ಮದು ಪುಟ್ಟ ಮನೆ. ಹಾಗಾಗಿ ಅಡುಗೆ ಮನೆ ಮೊದಲ ಮಹಡಿಯಲ್ಲಿ ಮಾಡಲಾಗಿದ್ದು, ಗ್ರೌಂಡ್ ಫ್ಲೋರ್ ನಲ್ಲಿ ವಿಸ್ತಾರವಾದ ಹಾಲ್ ಮಾಡಿದ್ದೇವೆ. ಯಾರೇ ಅತಿಥಿಗಳು ಬಂದ್ರೂ ಪತ್ನಿ ಕಾಜಲ್ ಮೇಲೆ, ಕೆಳಗೆ ಓಡಾಡುವಂತಾಗಿತ್ತು. ಹಾಗಾಗಿ ಲಿಫ್ಟ್ ಮಾಡಿದೆ. ಇನ್ನೂ ಕೊರೊನಾ ಕಾಲದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿತ್ತು. ಕ್ವಾರಂಟೈನ್ ಸಂದರ್ಭದಲ್ಲಿ ಲಿಫ್ಟ್ ನಮಗೆ ಹೆಚ್ಚು ಉಪಯುಕ್ತವಾಯ್ತು ಎಂದು ಅನುಜ್ ಕುಮಾರ್ ಹೇಳಿದ್ದಾರೆ.
ಸದ್ಯ ಅನುಜ್ ಕುಮಾರ್ ನೀಡಿದ ಗಿಫ್ಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮನೆಯ ಸುತ್ತಲಿನ ಮಹಿಳೆಯರು, ಸಂಬಂಧಿಕರು ಲಿಫ್ಟ್ ನೋಡಲು ಅನುಜ್ ಕುಮಾರ್ ಮನೆಗೆ ದೌಡಾಯಿಸುತ್ತಿದ್ದಾರೆ. ಮನೆಯ ಬರುವ ಅತಿಥಿಗಳಿಗೆ ಕಾಜಲ್, ಇದೇ ಲಿಫ್ಟ್ ಮೂಲಕವೇ ಚಹಾ, ತಿಂಡಿ ನೀಡುತ್ತಿದ್ದಾರೆ.