ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಖುಷಿಗೆ ಕ್ರೀಡಾಪಟು ಓರ್ವ ತನ್ನ ಅಂಗಿಯನ್ನು ಹರಿದುಕೊಂಡು ಸಂಭ್ರಮ ಪಟ್ಟು ಇದೀಗ ವೈರಲ್ ಆಗುತ್ತಿದ್ದಾರೆ.
Advertisement
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದೆಂದರೆ ಸುಲಭದ ಮಾತಲ್ಲ. ಹಲವು ವರ್ಷಗಳ ಶ್ರಮ ಅಲ್ಲಿರುತ್ತದೆ. ಪುರುಷರ ವಿಭಾಗದ 400 ಮೀ. ಅಡೆತಡೆ ಓಟದಲ್ಲಿ ನಾರ್ವೇಯ ಕಾರ್ಸ್‍ಟೆನ್ ವಾರ್‍ಹೋಂ ಸ್ಪರ್ಧಿಸಿ ಕೇವಲ 45.94 ಗುರಿ ತಲುಪಿ ಚಿನ್ನದ ಪದಕದೊಂದಿಗೆ ಈ ಹಿಂದಿನ ವಿಶ್ವದಾಖಲೆಯನ್ನು ಮುರಿದರು. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ನ ಚಿನ್ನದ ಮೀನು ಡ್ರೆಸ್ಸೆಲ್
Advertisement
Advertisement
25 ವರ್ಷ ಪ್ರಾಯದ ಕಾರ್ಸ್‍ಟೆನ್ ವಾರ್‍ಹೋಂ ಒಲಿಂಪಿಕ್ಸ್‌ನಲ್ಲಿ ತನ್ನ ನೈಜ ಪ್ರದರ್ಶನ ತೋರಿ ಗುರಿಮುಟ್ಟುತಿದ್ದಂತೆ ತಾನು ಧರಿಸಿದ್ದ ಜೆರ್ಸಿಯನ್ನು ಹರಿದುಕೊಂಡು ಸಂಭ್ರಮ ಪಟ್ಟರು. ಈ ಸಂಭ್ರಮಾಚರಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ ತೊಡಗಿದೆ.
Advertisement
400 ಮೀಟರ್ ಅಡೆತಡ ಓಟದಲ್ಲಿ ಅಮೆರಿಕದ ರೈ ಬೆಂಜಮಿನ್ 46.17 ಸೆಕೆಂಡುಗಳಲ್ಲಿ ಗುರಿಮುಟ್ಟಿ ಬೆಳ್ಳಿ ಪದಕ ಗೆದ್ದರೆ, ಬ್ರೆಜಿಲ್‍ನ ಅಲಿಸನ್ ಡಾಸ್ ಸ್ಯಾಂಟೋಸ್ 46.72 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಗೆದ್ದರು.