‘ಚಿನ್ನ’ದ ಹುಡುಗ ನೀರಜ್ ಚೋಪ್ರಾಗೆ ಹೆಚ್‍ಡಿಕೆ ಅಭಿನಂದನೆ

Public TV
2 Min Read
NEERAJ HDK

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ‘ಚಿನ್ನ’ ನೀರಜ್ ಚೋಪ್ರಾ ಕಮಾಲ್ ಮಾಡಿದ್ದು, ಇದೀಗ ರೈತನ ಮಗನ ಸಾಧನೆಗೆ ಶುಭಾಶಯಗಳ ಸುರಿಮಳೆಗಳೇ ಬರುತ್ತಿವೆ. ರಾಜಕಾರಣಿ, ಸೆಲೆಬ್ರಿಟಿಗಳು ಸೇರಿದಂತೆ ಎಲ್ಲರೂ ಯೋಧನ ಸಾಹಸಕ್ಕೆ ಶಹಬ್ಬಾಸ್ ಗಿರಿ ಹೇಳುತ್ತಿದ್ದಾರೆ. ಅಂತೆಯೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೂಡ ನೀರಜ್ ಚೋಪ್ರಾ ಅವರಿಗೆ ವಿಶ್ ಮಾಡಿದ್ದಾರೆ.

ಹೌದು, ಸರಣಿ ಟ್ವೀಟ್ ಮಾಡುವ ಮೂಲಕ ಚೊಚ್ಚಲ ಚಿನ್ನದ ಪದಕ ಗೆದ್ದು ಕೊಟ್ಟು ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಅಲ್ಲದೆ ಹಾಕಿ ತಂಡದಲ್ಲಿ ಸಾಧನೆಗೈದವರ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹರಿಯಾಣ ಸರ್ಕಾರ 6 ಕೋಟಿ, ಆನಂದ್ ಮಹೀಂದ್ರ ಕಾರ್ ಗಿಫ್ಟ್- ಚಿನ್ನದ ನೀರಜ್‍ಗೆ ಭರ್ಜರಿ ಉಡುಗೊರೆ

ಟ್ವೀಟ್ ನಲ್ಲೇನಿದೆ..?
ಟೊಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ, ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ಗೆದ್ದು ಕೊಟ್ಟು ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಚಿನ್ನದ ಸಾಧನೆ ಮಾಡುವ ಮೂಲಕ ನೀರಜ್ ಚೋಪ್ರಾ ಭಾರತದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ್ದಾರೆ. ನೀರಜ್ ಸಾಧನೆ ಪ್ರೇರಣದಾಯಕ. ಇದನ್ನೂ ಓದಿ: ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆ

ಒಲಿಂಪಿಕ್ಸ್ ನಲ್ಲಿ ನಮ್ಮ ಹಾಕಿ ತಂಡಗಳು ಅಚ್ಚರಿ ಮೂಡಿಸಿದ್ದು, 41 ವರ್ಷಗಳ ಬಳಿಕ ಪುರುಷರ ತಂಡ ಪದಕ ಗೆದ್ದರೆ, ಮಹಿಳಾ ತಂಡ ನೆನಪಿಟ್ಟುಕೊಳ್ಳವ ಸಾಧನೆ ಮಾಡಿದೆ. ಇದರ ಹಿಂದೆ ಒಡಿಶಾ ಸರ್ಕಾರದ ಪ್ರೋತ್ಸಾಹ ಇರುವುದು ಗಮನಾರ್ಹ. ಹಾಕಿ ತಂಡದ ಪ್ರಯೋಜಕತೆ ಪಡೆದ ಒಡಿಶಾ ತಂಡಕ್ಕೆ ಸಕಲವನ್ನು ಒದಿಗಿಸಿ ಪ್ರೋತ್ಸಾಹಿಸಿತು. ಒಡಿಶಾದ ಕ್ರಮ ಅನುಕರಣೀಯ.

ಒಡಿಶಾ ಹಾಕಿಯನ್ನು ಪ್ರೋತ್ಸಾಹಿಸಿದಂತೆ ಎಲ್ಲ ರಾಜ್ಯಗಳೂ ಒಂದೊಂದು ಕ್ರೀಡೆಯನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ. ಈ ಮೂಲಕ ಪ್ರತಿಯೊಂದು ಕ್ರೀಡೆಗೆ ಪ್ರೋತ್ಸಾಹ ಸಿಗುವಂತೆ ಮಾಡುವುದು, ವಿಶ್ವ ಮಟ್ಟದ ಕೂಟದಲ್ಲಿ ಭಾರತದ ಘನತೆ ಎತ್ತಿ ಹಿಡಿಯುವುದು ಆದ್ಯತೆ ಆಗಬೇಕು. ಸಂಸದೀಯ ಸ್ಥಾಯಿಸಮಿತಿ(ಕ್ರೀಡೆ) ಇದೇ ಶಿಫಾರಸನ್ನು ಕೇಂದ್ರಕ್ಕೆ ಮಾಡಿದೆ ಎಂದು ಸರಣಿ ಟ್ವೀಟ್ ನಲ್ಲಿ ಹೆಚ್‍ಡಿಕೆ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *