– ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದ ಧ್ರುವ ಸರ್ಜಾ
– ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್
ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದೆ. ಹೊಸ ಕೋವಿಡ್ 19 ಮಾರ್ಗಸೂಚಿಯನ್ನು ಹೊರಡಿಸುವಂತೆ ಸರ್ಕಾರ ಸೂಚಿಸಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್, ಕೋವಿಡ್ 19 ಸಲಹಾ ಸಮಿತಿಯ ನೀಡಿದ ಸಲಹೆಯ ಆಧಾರದ ಮೇರೆಗೆ ನಿನ್ನೆ ಸರ್ಕಾರ ಆದೇಶವನ್ನು ಹೊರಡಿಸಿತ್ತು. ಆದರೆ ಇಂದು ಚಲನ ಚಿತ್ರ ರಂಗದ ಗಣ್ಯರು ಶೇ.100 ರಷ್ಟು ಪ್ರವೇಶಕ್ಕೆ ಅನುಮತಿ ನೀಡದಿದ್ದರೆ ಇದನ್ನೇ ನಂಬಿಕೊಂಡವರ ಜೀವನ ಕಷ್ಟವಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿ ಶೇ.100 ರಷ್ಟು ಭರ್ತಿಗೆ ಅವಕಾಶ ನೀಡುತ್ತೇವೆ. ನಾಳೆ ಚಲನ ಚಿತ್ರ ಮಂದಿರಗಳಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ತಿಳಿಸಿದರು.
Advertisement
ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿದ ಕೊರೊನಾ ಮಾರ್ಗಸೂಚಿಗಳಲ್ಲಿ ಚಿತ್ರಮಂದಿರಗಳಿಗೆ ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿತ್ತು. ಆದರೆ ರಾಜ್ಯ ಸರ್ಕಾರ ಮಾತ್ರ ಒಪ್ಪಿಗೆ ಸೂಚಿಸಿರಲಿಲ್ಲ. ಇದಕ್ಕೆ ಸ್ಯಾಂಡಲ್‍ವುಡ್‍ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಪಬ್ಲಿಕ್ ಟಿವಿ ಸಹ ನಿರತಂತರವಾಗಿ ಸುದ್ದಿ ಬಿತ್ತರಿಸಿತ್ತು. ಇದೀಗ ವರದಿಯ ಫಲವಾಗಿ ರಾಜ್ಯ ಸರ್ಕಾರ ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದೆ.
Advertisement
Advertisement
ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಭರ್ತಿಗೆ ನಿರ್ಬಂಧ ಹೇರಿ ಶೇ.50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ರಾಜ್ಯ ಸರ್ಕಾರದ ಅದೇಶಕ್ಕೆ ನಟ ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್‍ವುಡ್‍ನ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರವೇಶ ಕಲ್ಪಿಸುವ ಸಂಬಂಧ ಇಂದು ಸಂಜೆ 5 ಗಂಟೆಗೆ ಸರ್ಕಾರ ದಿಢೀರ್ ಆರೋಗ್ಯ ಇಲಾಖೆಯ ಜೊತೆ ಸಭೆ ನಡೆಸಿತ್ತು. ಸಭೆಯ ಬಳಿಕ ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದೆ.
Advertisement
ಮಾರ್ಕೆಟ್ ಗಳಲ್ಲಿ ಗಿಜಿಗುಡುವಂತೆ ಜನ, ಬಸ್ ಫುಲ್ ರಶ್, ಚಿತ್ರಮಂದಿರಕ್ಕೆ ಮಾತ್ರ ಶೇ.50 ನಿರ್ಬಂಧ ಎಂದು ನಟ ಧ್ರುವ ಸರ್ಜಾ ಪೋಸ್ಟ್ ಮಾಡುವ ಮೂಲಕ ಅಭಿಯಾನವನ್ನು ಪ್ರಾರಂಭಿಸಿದ್ದರು. ಇದಕ್ಕೆ ಇಡೀ ಚಿತ್ರರಂಗವೇ ಒಟ್ಟಾಗಿ ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರವನ್ನು ಪ್ರಶ್ನಿಸಿತ್ತು.
ಖಾಸಗಿ ಕಾರ್ಯಕ್ರಮಗಳು, ದೇವಸ್ಥಾನ, ಚರ್ಚ್, ಮಸೀದಿ, ಮಾರ್ಕೆಟ್, ಸಾರ್ವಜನಿಕ ಸಾರಿಗೆಗಳು, ಪ್ರವಾಸೋದ್ಯಮಗಳು ಯಾಥಾವತ್ತಾಗಿ ತೆರೆದಿರುವಾಗ ಸಿನಿಮಾ ಥಿಯೇಟರ್‍ಗಳು ಯಾಕಿರಬಾರದು ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರಶ್ನಿಸಿ ಟ್ವೀಟ್ ಮಾಡಿದ್ದರು.
ಸಿನಿಮಾ ಕೆಲವರಿಗೆ ಎಂಟರ್ಟೈನ್‍ಮೆಂಟ್ ಆದರೆ ಇನ್ನು ಹಲವರಿಗೆ ಅದೇ ಜೀವಾಳವಾಗಿದೆ ಎಂದು ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ತೆದೆದುಕೊಂಡಿರುವ ನಿರ್ಧಾರದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸಹ ಚಿತ್ರಮಂದಿರಗಳಲ್ಲಿ ಶೇ.100 ಭರ್ತಿಗೆ ಅವಕಾಶ ನೀಡಬೇಕು. ಚಿತ್ರಮಂದಿರದ ನಾವೆಲ್ಲರೂ ಜೊತೆಯಲ್ಲಿದ್ದೇವೆ. ಸರ್ಕಾರದ ನಿರ್ಧಾರ ಬದಲಾಗಬೇಕು ಎಂದು ಹೇಳಿ ವೀಡಿಯೋ ಶೇರ್ ಮಾಡಿದ್ದರು. ಎಲ್ಲ ಸಾರ್ವಜನಿಕ ಪ್ರದೇಶಗಳು ಜನಸಂದಣಿಯಿಂದ ಕೂಡಿದೆ. ಕರ್ನಾಟಕದಲ್ಲಿ ರಂಗಭೂಮಿಯನ್ನು ಶೇ.50 ಕ್ಕೆ ಮಾತ್ರ ಸೀಮಿತಗೊಳಿಸಿದೆ. ಏಕೆ? ಸಿನೆಮಾ ರಾಜ್ಯಾದ್ಯಂತ ಅನೇಕರಿಗೆ ಜೀವನೋಪಾಯದ ಸಾಧನವಾಗಿದೆ ಎಂಬುದನ್ನು ನಾವು ಮರೆಯುತ್ತಿದ್ದೇವೆ ಎಂದು ರಕ್ಷಿತ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದರು.
ಬೀದಿಗಳು, ಬಸ್ಸುಗಳು, ಮಾಲ್‍ಗಳು, ಪಬ್‍ಗಳು ಮತ್ತು ಇತರ ಎಲ್ಲ ಸಾರ್ವಜನಿಕ ಪ್ರದೇಶಗಳು ಜನರಿಂದ ತುಂಬಿರುವಾಗ, ಕರ್ನಾಟಕ ಸರ್ಕಾರ ಶೇ.100 ಥಿಯೇಟರ್ ಆಕ್ಯುಪೆನ್ಸೀ ಘೋಷಣೆಯನ್ನು ಏಕೆ ಹಿಂತೆಗೆದುಕೊಂಡಿದೆ ಎಂದು ನೆನಪಿರಲಿ ಪ್ರೇಮ್ ಪ್ರಶ್ನಿಸಿದ್ದರು.
ಧನಂಜಯ್, ಧುನಿಯಾ ವಿಜಯ್, ಪ್ರೀತಮ್ ಗುಬ್ಬಿ, ಸಿಂಪಲ್ ಸುನಿ ಹೀಗೆ ಸಿನಿಮಾ ಮಂದಿ ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗೆ ಸಿನಿಮಾ ರಂಗದಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ಸರ್ಕಾರ ನಿರ್ಧಾರ ಬದಲಿಸಿದ್ದು, ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದೆ.