ಖಾಸಗಿ ವಾಹಿನಿಯಲ್ಲಿ ನಿರೂಪಕನಾಗಿ ಖ್ಯಾತಿ ಗಳಿಸಿದ್ದ ಪವನ್ ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ ಧೀರ ಸಾಮ್ರಾಟ್. ಕಳೆದ ವರ್ಷ ಜನವರಿಯಲ್ಲಿ ಸೆಟ್ಟೇರಿದ್ದ ಈ ಸಿನಿಮಾ 45 ದಿನಗಳ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿ ಚಿತ್ರೀಕರಣಕ್ಕೆ ತೆರೆ ಎಳೆದಿದೆ.
Advertisement
ಕೊನೆಯ ದಿನದ ಶೂಟಿಂಗ್ ಬೆಂಗಳೂರಿನ ಹೊರ ಭಾಗದಲ್ಲಿ ನಡೆದಿದ್ದು, ಸಾಹಸ ದೃಶ್ಯಗಳನ್ನು ಸೆರೆ ಹಿಡಿಯುವ ಮೂಲಕ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದಿದೆ ಚಿತ್ರತಂಡ. ಸಸ್ಪೆನ್ಸ್ ಥ್ರಿಲ್ಲರ್ ಎಲಿಮೆಂಟ್ ಕಥೆಯಾಧಾರಿತ ಸನಿಮಾವಾಗಿದೆ. ಪವನ್ ಕುಮಾರ್ ಅವರು ಧೀರ ಸಾಮ್ರಾಟ್ ಚಿತ್ರತಂಡ ಯುವ ಪಡೆಯನ್ನು ಕಟ್ಟಿಕೊಂಡು ಹೊಸ ಭರವಸೆಯೊಂದಿಗೆ ಮೊದಲ ಸಿನಿಮಾ ಆರಂಭಿಸಿದ್ದಾರೆ. ಚಿತ್ರದಲ್ಲಿ ಖಳನಟನಾಗಿಯೂ ಬಣ್ಣ ಹಚ್ಚಿದ್ದಾರೆ. ರಾಕೇಶ್ ಬಿರಾದರ್, ಅದ್ವಿತಿ ಶೆಟ್ಟಿಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ನಾಗೇಂದ್ರ ಅರಸ್, ಬಲರಾಜ್ ವಾಡಿ, ಶೋಭರಾಜ್, ಶಂಕರ್ ಭಟ್, ರಮೇಶ್ ಭಟ್, ಸಂಕಲ್ಪ್, ಹರೀಶ್ ಅರಸು, ಇಂಚರ ಸೇರಿದಂತೆ ಹಲವು ಕಲಾವಿದರ ತಾರಾಬಳಗವೇ ಸಿನಿಮಾದಲ್ಲಿ ಇರಲಿದೆ.
Advertisement
Advertisement
ಖ್ಯಾತ ನೃತ್ಯ ನಿರ್ದೇಶಕರಾದ ಮುರುಳಿ ಮಾಸ್ಟರ್, ಕಿಶೋರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಧೀರ ಸಾಮ್ರಾಟ್ ಹಾಡುಗಳು ಮೂಡಿ ಬಂದಿದೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನಲ್ಲಿ ಚಿತ್ರದ ಸಾಹಸ ದೃಶ್ಯಗಳು ಮೈನವಿರೇಳಿಸುವಂತೆ ತೆಗೆಯಲಾಗಿದೆ. ವಿರೇಶ್ ಹಾಗೂ ಅರುಣ್ ಚಿತ್ರಕ್ಕೆ ಇಬ್ಬರು ಛಾಯಾಗ್ರಾಹಕ ಕೆಲಸವನ್ನು ಮಾಡಿದ್ದಾರೆ. ಸುರೇಶ್ ಅವರ ಕ್ಯಾಮೆರಾ ನಿರ್ದೇಶನದ ಕೈಚಳಕದಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಚೇತನ್ ಕುಮಾರ್, ವಿ.ನಾಗೇಂದ್ರ ಪ್ರಸಾಧ್ ಸಾಹಿತ್ಯ ಕೃಷಿಯಲ್ಲಿ ಧೀರ ಸಾಮ್ರಾಟ್ ಹಾಡುಗಳು ಮೂಡಿ ಬಂದಿದ್ದು, ರಾಘವ್ ಸುಭಾಷ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
Advertisement
ತನ್ವಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಗುರು ಬಂಡಿ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದಾರೆ. ಸದ್ಯಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿರೋ ಧೀರಾ ಸಾಮ್ರಾಟ್ ಚಿತ್ರತಂಡ, ಏಪ್ರಿಲ್‍ನಲ್ಲಿ ಚಿತ್ರವನ್ನು ತೆರೆ ಮೇಲೆ ತರೋ ಸಾಧ್ಯತೆ ಇದೆ.