ಚಿಕ್ಕಮಗಳೂರು: ಜಿಲ್ಲೆಯ ಜನ ಪ್ರಾಣದ ಹಂಗು ತೊರೆದು ನದಿಯ ಮೂಲಕ ಓಡಾಡ ನಡೆಸುತ್ತಿದ್ದಾರೆ.
ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ಅಪಾಯವನ್ನು ಲೆಕ್ಕಿಸದೆ ನದಿಯಲ್ಲಿ ಜನ ಓಡಾಡುತ್ತಿದ್ದಾರೆ. ಯಾಕಂದರೆ ಅಲ್ಲಿನ ಜನರಿಗೆ ಒಮದು ಕಡೆಯಿಂದ ಇನ್ನೊಂದು ಕಡೆಗೆ ಬರಬೇಕಾದರೆ ರಸ್ತೆಯಿಲ್ಲ. ಹೀಗಾಗಿ ಅವರು ಅನಿವಾರ್ಯವಾಗಿ ನದಿಯನ್ನು ದಾಟಿ ಬರುತ್ತಿದ್ದಾರೆ.
ಪ್ರಾಣದ ಹಂಗು ತೊರೆದು ಹೇಮಾವತಿ ನದಿಯನ್ನು ದಾಟಿ ಬರುತ್ತಿದ್ದಾರೆ. ಈ ನದಿಗೆ ಕಟ್ಟಲಾಗಿದ್ದ ತಾತ್ಕಾಲಿಕ ಸೇತುವೆ ವಾರದ ಹಿಂದೆ ಸುರಿದ ಭಾರೀ ಮಳೆಯಿಂದಾ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು. ಕಳೆದ ಬಾರಿಯ ಪ್ರವಾಹದಲ್ಲಿ ಬಂಕೇನಹಳ್ಳಿ ಸೇತುವೆ ಕೊಚ್ಚಿ ಹೋಗಿತ್ತು. ಸೇತುವೆ ನಿರ್ಮಿಸಲು ಸರ್ಕಾರ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಿಕೊಂಡಿದ್ದರು.