ಜೈಪುರ್: ಚಲಿಸುತ್ತಿದ್ದ ರೈಲಿನಿಂದ ಕೆಳಗಡೆ ಬಿಳುತ್ತಿದ್ದ ವೃದ್ಧರೊಬ್ಬರ ಪ್ರಾಣವನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿ ಕೇಂದ್ರ ರೈಲ್ವೆ ಮಂತ್ರಿ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.
ವೃದ್ಧರೊಬ್ಬರು ಚಲಿಸುತ್ತಿರುವ ರೈಲಿನಿಂದ ಕೆಳಗಡೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸಿಬ್ಬಂದಿ ಹೋಗಿ ವೃದ್ಧನನ್ನು ಕಾಪಾಡಿರುವ ಘಟನೆ ರಾಜಸ್ಥಾನದ ಸವಾಯ್ ಮಾಧೋಪೂರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ವೀಡಿಯೋದಲ್ಲಿ ಏನಿದೆ?
ವೃದ್ಧ ವ್ಯಕ್ತಿ ರೈಲಿನಿಂದ ಇಳಿಯಲೆಂದು ರೈಲಿನ ಬೋಗಿಯ ಬಾಗಿಲ ಬಳಿ ನಿಂತುಕೊಂಡಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಈ ವೇಳೆ ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ, ವೃದ್ಧನ ಜೀವವನ್ನು ಕಾಪಾಡಿದ್ದಾರೆ. ಅಚಾನಕ್ಕಾಗಿ ನಡೆದಿರುವ ಈ ದುರ್ಘಟನೆಯ ವೀಡಿಯೋವನ್ನು ಹಂಚಿಕೊಂಡು ಸಿಬ್ಬಂದಿಯ ಕೆಲಸಕ್ಕೆ ಗೋಯಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
राजस्थान के सवाई माधोपुर स्टेशन पर एक बुजुर्ग यात्री को ड्यूटी पर तैनात सुरक्षा कर्मी द्वारा त्वरित कार्रवाई करते हुए ट्रेन की चपेट में आने से बचाया गया।
अपने सुरक्षाकर्मियों पर हमें गर्व है, जो पूरे सेवाभाव के साथ अपने दायित्व का निर्वहन कर रहे हैं। pic.twitter.com/qghECbmTZo
— Piyush Goyal (@PiyushGoyal) April 2, 2021
ರಾಜಸ್ಥಾನದ ಸವಾಯಿ ಮಾದೋಪುರ್ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅಪಾಯದಲ್ಲಿರುವ ವೃದ್ಧ ಪಾರಾಗಿದ್ದಾರೆ. ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ನಮ್ಮ ಭದ್ರತಾ ಸಿಬ್ಬಂದಿ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಬರೆದುಕೊಂಡು ವೀಡಿಯೋವನ್ನು ಸಚಿವರು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ.