ಚೆನ್ನೈ: ಚಪ್ಪಲಿಯಲ್ಲಿ ಚಿನ್ನವನ್ನು ಇಟ್ಟು ಸಾಗಿಸುತ್ತಿದ್ದ ವ್ಯಕ್ತಿ ಏರ್ ಪೋರ್ಟ್ ನಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಏರ್ ಪೋರ್ಟ್ ನಲ್ಲಿ ವ್ಯಕ್ತಿಯೊಬ್ಬನ ಚಪ್ಪಲಿ ಕಿತ್ತು ಹೋಯಿತ್ತು ಎಂದು ಸಹಾಯ ಮಾಡಲು ಸಿಬ್ಬಂದಿ ಹೋದಾಗ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸಮೇತ ಆರೋಪಿ ಸಿಕ್ಕಿಬಿದ್ದಿರುವ ಘಟನೆ ಚೆನ್ನೈ ಏರ್‍ಪೋರ್ಟ್ ನಲ್ಲಿ ನಡೆದಿದೆ.
Advertisement
Advertisement
ಆರೋಪಿ ತಮಿಳುನಾಡಿನ ರಾಮನಾಥಪುರಂನ ಮೊಹಮ್ಮದ್ ಹಾಸಿಂ ಅಲಿ(21) ಎಂದು ಗುರುತಿಸಲಾಗಿದೆ. ಈತ ದುಬೈನಿಂದ ಚೆನ್ನೈಗೆ ಬರುತ್ತಿದ್ದನು. ಆಗ ವಿಮಾನ ನಿಲ್ದಾಣದಲ್ಲಿ ಈತ ಧರಿಸಿದ್ದ ಚಪ್ಪಲಿ ಕಿತ್ತು ಹೋಗಿದೆ. ಇದನ್ನು ಗಮನಿಸಿದ ಕಸ್ಟಮ್ ಇಲಾಖೆಯ ಸಿಬ್ಬಂದಿ ಚಪ್ಪಲಿಯನ್ನು ಹಿಂದಿರುಗಿಸಲು ಹೋದಾಗ ಸಿಬ್ಬಂದಿಗೆ ಅನುಮಾನ ಬಂದಿದೆ.
Advertisement
Advertisement
ಸಾಮಾನ್ಯವಾಗಿ ಚಪ್ಪಲಿಗೆ ಅಗಲವಾದ ಪಟ್ಟಿ ಇರುತ್ತದೆ. ಆದರೆ ಈ ಚಪ್ಪಲಿಗೆ ಕೊಂಚ ವಿಭಿನ್ನವಾಗಿ ಇದೆ. ಹಾಗೆ ಭಾರವಾಗಿದೆ ಎಂದು ಅನುಮಾನದಿಂದ ಅಧಿಕಾರಿಗಳು ಪರಿಶೀಲಸಿ ನೋಡಿದಾಗ ಚಪ್ಪಲಿಯ ಪಟ್ಟಿಯಲ್ಲಿ ಸಣ್ಣ ರಂಧ್ರ ಕೊರೆದು ದ್ರವೀಕೃತ ಚಿನ್ನವನ್ನು ಸುತ್ತಿಟ್ಟಿದ್ದು ಪತ್ತೆಯಾಗಿದೆ. ಈ ಹಿಂದೆಯೂ 14.12 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಈತ ಹೀಗೆ ಸಾಗಿಸಿದ್ದನು ಎಂದು ತಿಳಿದು ಬಂದಿದೆ.