ಚಕ್ರವರ್ತಿಗೆ ಅಂಕಕೊಟ್ಟು ಅಳೆದ ಬಿಗ್‍ಬಾಸ್ ಸ್ಪರ್ಧಿಗಳು

Public TV
2 Min Read
bigg boss 4

ಬಿಗ್‍ಬಾಸ್ ಮನೆಯ ವಾರದ ಕಟ್ಟೆ ಪಂಚಾಯ್ತಿಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ವಾರದ ಕಥೆ ಕಿಚ್ಚನ ಜೊತೆಯಲ್ಲಿ ಮನೆಯ ಸದಸ್ಯರೆಲ್ಲರೂ ಒಂದಾಗಿ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯನ್ನು ಬೇರೆ ಎಂದು ನೋಡುತ್ತಿದ್ದಾರೆ ಎಂಬುದು ಬಯಲಾಗಿದೆ.

bigg boss2

ಮನೆಯಲ್ಲಿರುವ ಸದಸ್ಯರು ಎಷ್ಟೇ ಚೆನ್ನಾಗಿ ಇರುತ್ತಾರೆ ಎಂದರೂ ಗೆಲ್ಲುವ ಹಂಬಲ ಎಲ್ಲರಲ್ಲಿಯೂ ಇದೆ. ತಾನು ಸೇವ್ ಆಗಬೇಕು, ಅಂತಿಮ ಘಟ್ಟದವರೆಗೂ ನಾವು ಇರಬೇಕು ಎಂದು ಪ್ರತಿಯೊಬ್ಬ ಬಿಗ್‍ಬಾಸ್ ಸ್ಪರ್ಧಿಯು ಕೂಡ ಅಂದುಕೊಳ್ಳುತ್ತಾನೆ. ಹೀಗಿದ್ದರೂ ಮನೆಯವರಿಗೆ ನಾವೆಲ್ಲ ಒಂದೇ ಎನ್ನುವ ಭಾವನೆಯೂ ಇದೆ ಎನ್ನುವುದು ತಿಳಿದು ಬಂದಿದೆ.

ಮನೆಗೆ ಹೊಸ ಅತಿಥಿ ಬಂದ ದಿನದಿಂದಲೂ ಮನೆಯವರಿಗೆ ಆತಂಕ ಎದುರಾಗಿದೆ. ವೈಲ್ಡ್ ಕಾರ್ಡ್ ಎಂಟಿ ಮೂಲಕವಾಗಿ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಒಂಟಿ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಈ ವಿಚಾರವಾಗಿ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಕೊಂಚ ಬೇಸರವಾಗಿದೆ. ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕುರಿತಾಗಿ ಏನು ಹೇಳುತ್ತಾರೆ ಎಂದು ತಿಳಿದುಕೊಳ್ಳಲು ಸುದೀಪ್, ಚಕ್ರವರ್ತಿ ಅವರಿಗೆ ನೀವು ಅಂಕವನ್ನು ಕೊಟ್ಟು, ಸೂಕ್ತ ಕಾರಣವನ್ನು ಹೇಳಿ ಎಂದು ಹೇಳಿದ್ದಾರೆ. ಈ ವೇಳೆ ಮನೆ ಮಂದಿ ಅಂಕವನ್ನುಕೊಟ್ಟು ಕೇಳಿರುವ ಹೇಳಿಕೆಯನ್ನು ಕೇಳಿ ಸುದೀಪ್ ಸುಮ್ಮನೆ ನಿಂತು ಕೇಳುತ್ತಿದ್ದಾರೆ.

chandrachud

ಒಂದು, ಝೀರೋ, ಮೈನಸ್ ಒಂದು, ಝೀರೋ, ಅರ್ಧ ಎಂದು ಮಾಕ್ರ್ಸ್ ಕೊಟ್ಟಿದ್ದಾರೆ. ಅವರ ಬಳಿ ಭಾಷೆಯ ಮೇಲೆ ಹಿಡಿತ ಇರಬಹುದು ಅದನ್ನು ಇಟ್ಟುಕೊಂಡು ಬೇರೆ ಟ್ಯಾಲೆಂಟ್‍ನ್ನು ರೂಲ್ ಮಾಡಲು ಸಾಧ್ಯವಿಲ್ಲ. ತುಂಬಾ ಡಾಮಿನೇಟಿಂಗ್, ಬೇರೆಯವರ ಬಗ್ಗೆ ಕಾಮೆಂಟ್ ಮಡುವುದು ಸುಲಭ. ಆದರೆ ಅದರಂತೆ ನಡೆಯುವುದು ಕಷ್ಟ.. ಹೀಗೆ ಹಲವು ಕಾರಣಗಳನ್ನು ಕೊಟ್ಟಿದ್ದಾರೆ.

chandrachud4

ಮನೆಯವರು ಅಂಕವನ್ನು ಕೊಟ್ಟು ಕೆಲವಷ್ಟು ಕಾರಣಗಳನ್ನು ಹೇಳುತ್ತಿರುವಾಗ ಸುದೀಪ್ ಅವರು ನಕ್ಕಿದ್ದಾರೆ. ಆದರೆ ಮನೆಯವರ ಅನಿಸಿಕೆಗಳನ್ನು ಕೇಳಿದ ಚಕ್ರವರ್ತಿ ಚಂದ್ರಚೂಡ್ ಮಾತ್ರ ತಲೆ ಅಲ್ಲಾಡಿಸುತ್ತಾ ಸುಮ್ಮನೆ ಕುಳಿತು ಕೇಳಿದ್ದಾರೆ. ಇಂದಿನ ಸಂಚಿಕೆಯಲ್ಲಿ ಮನೆಯವರು ಅಂಕವನ್ನು ಕೊಟ್ಟು ವೈಲ್ಡ್ ಕಾರ್ಡ್ ಎಂಟ್ರಿ ಕುರಿತಾಗಿ ಬಿಸಿ ಬಿಸಿ ಚರ್ಚೆಯಾಗಲಿದೆ.

ಮನೆಯಲ್ಲಿ ಬಿಗ್‍ಬಾಸ್ ಆಟ ಶುರುವಾಗಿದೆ. ಮನೆಯ ಆಟ ದಿನದಿಂದ ದಿನಕ್ಕೆ ರಂಗೇರುವ ಸಮಯದಲ್ಲಿಯೆ ವೈಲ್ಡ್ ಕಾರ್ಡ್ ಎಂಟ್ರಿ ಮನೆಯಲ್ಲಿ ಇನ್ನುಷ್ಟು ಆಟದ ವೈಖರಿಯೆ ಬದಲಾದಂತಿದೆ. ಇಂದಿನ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಯಾವೆಲ್ಲಾ ಇಂಟ್ರೆಸ್ಟಿಂಗ್ ವಿವರಗಳು ಹೊರ ಬರುತ್ತವೆ ಎಂಬುದನ್ನು ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *