ಲಾಕ್ಡೌನ್ ಇರುವುದರಿಂದ ಹೋಟೆಲ್ಗಳಿಗೆ ಹೋಗಿ ಊಟ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲಿ ನೀವು ಸರಳವಾಗಿ ಮತ್ತು ಸುಲಭವಾಗಿ ಎಲ್ಲರಿಗೂ ಇಷ್ಟವಾಗುವ ಘಮ ಘಮಿಸುವ ಮಸಾಲಾ ಚಿಕನ್ ಫ್ರೈ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
Advertisement
* ಚಿಕನ್ – 1 ಕೆಜಿ
* ನಿಂಬೆಹಣ್ಣಿನ ರಸ- 1 ಚಮಚ
* ಉಪ್ಪು- 1 ಚಮಚ
* ಅರಿಶಿನದ ಪುಡಿ- ಸ್ವಲ್ಪ
* ಅಚ್ಛಖಾರದ ಪುಡಿ- 2 ಚಮಚ
* ಅಡುಗೆ ಎಣ್ಣೆ -3-4 ಚಮಚ
* ಈರುಳ್ಳಿ- ಉದ್ದಕ್ಕೆ ಹೆಚ್ಚಿದ್ದು 1-2
* ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು
* ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1
* ದನಿಯಾ ಪುಡಿ – 1 ಚಮಚ
* ಗರಂ ಮಸಾಲೆ ಪುಡಿ – 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪಾತ್ರೆಯೊಂದನ್ನು ತೆಗೆದುಕೊಂಡು ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು, ಅದಕ್ಕೆ ನಿಂಬೆಹಣ್ಣಿನ ರಸ, ಉಪ್ಪು, ಅರಿಶಿನದ ಪುಡಿ, ಅಚ್ಚಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 20 ನಿಮಿಷ ನೆನೆಯಲು ಬಿಡಬೇಕು.
* ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಂಡು ನಂತರ ಪಕ್ಕಕ್ಕಿಟ್ಟುಕೊಳ್ಳಬೇಕು.
* ನಂತರ ಬಾಣಲೆಯಲ್ಲಿಯೇ ಉಳಿದ ಎಣ್ಣೆಗೆ ಶುಂಠಿ, ಬೆಳ್ಳುಳ್ಳಿ ಹಾಕಿ ಕೆಂಪಗೆ ಹುರಿದುಕೊಂಡು ನಂತರ ಈಗಾಗಲೇ ನೆನೆಸಿದ ಮಾಂಸವನ್ನು ಹಾಕಿ 5 ನಿಮಿಷ ಬೇಯಲು ಬಿಡಬೇಕು.
*ನಂತರ ಟೊಮೆಟೋ, ದನಿಯಾ ಪುಡಿ, ಗರಂ ಮಸಾಲೆ ಪುಡಿ ಹಾಕಿ 15 ನಿಮಿಷ ಬೇಯಿಸಬೇಕು. ನಂತರ ಈಗಾಗಲೇ ಹುರಿದಿಟ್ಟುಕೊಂಡ ಈರುಳ್ಳಿಯನ್ನು ಹಾಕಿ 10 ನಿಮಿಷ ಬೇಯಿಸಿದರೆ, ರುಚಿಕರವಾದ ಮಸಾಲಾ ಚಿಕನ್ ಫ್ರೈ ಸವಿಯಲು ಸಿದ್ಧ.