– ಬಹುಮಾನ ಘೋಷಿಸಿದ ಡಿಜಿಪಿ ಪ್ರವೀಣ್ ಸೂದ್
ಮೈಸೂರು: ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ತಂಡಕ್ಕೆ 5 ಲಕ್ಷ ಬಹುಮಾನ ನೀಡುವುದಾಗಿ ಡಿಜಿಪಿ ಪ್ರವೀಣ್ ಸೂದ್ ಘೋಷಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಗಳನ್ನು ಬಂಧಿಸುವ ಮುನ್ನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಆಗ ಅವರು ಮೊದಲು ನಮ್ಮ ಪೊಲೀಸರ ತಂಡಕ್ಕೆ ಬಹುಮಾನ ಘೋಷಿಸಿ ಎಂದು ತಿಳಿಸಿದರು. ಅದರಂತೆ ಪೊಲೀಸರ ತಂಡಕ್ಕೆ 5 ಲಕ್ಷ ಬಹುಮಾನ ನೀಡುವುದಾಗಿ ಹೇಳಿದರು.
Advertisement
Advertisement
20 ಗಂಟೆಯಲ್ಲಿ ಎರಡುಯ ಬಾರಿ ಪ್ರೆಸ್ ಮಿಟ್ ಮಾಡುವ ಸಂದರ್ಭ ಇದೇ ಮೊದಲ ಬಾರಿಗೆ ನನಗೆ ಬಂದಿದೆ. ಆ.23ರಂದು ನಡೆದಿದ್ದ ಪ್ರಕರಣ ಸಂಬಂಧ ಕಾರ್ಯಾಚರಣೆ ಯಶಸ್ವಿಯಾಗಿದೆ. ಆ. 24 ರಂದು ಬಹಳ ದುಃಖದ ಘಟನೆ ನಡೆದಿದೆ. ಹೇಳಕ್ಕೂ ಆಗದಂತಹ ದುಃಖದ ಘಟನೆ ನಡೆದಿದ್ದು, ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊದಲೇ ದರೋಡೆ ಮಾಡುತ್ತಿದ್ದ ಆರೋಪಿಗಳು ಈ ಜೋಡಿ ಬಳಿ ಬಂದು 3 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಅದು ಸಾಧ್ಯವಾಗದಿದ್ದಾಗ ಕೃತ್ಯ ಎಸಗಿ ಪರಾರಿಯಾಗಿದ್ದಾರೆ ಎಂದರು. ಇದನ್ನೂ ಓದಿ: ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!
Advertisement
Advertisement
ಇದಾದ ಬಳಿಕ ದಕ್ಷಿಣ ವಲಯ ಐಜಿ ಹಾಗೂ ಕಮಿಷನರ್ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವಿಶೇಷವಾಗಿ ಈ ಘಟನೆಯಲ್ಲಿ ಸಂತ್ರಸ್ತೆ ಇದೂವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಆಕೆಯ ಗೆಳೆಯ ಸ್ವಲ್ಪ ಮಾಹಿತಿ ನೀಡಿದ್ದಾರೆ. ಆದರೂ ಇದು ಕೂಡ ಅಸ್ಪಷ್ಟವಾಗಿತ್ತು. ನಿನ್ನೆ ಮೊನ್ನೆ ಸಾಕಷ್ಟು ಸಾರ್ವಜನಿಕರಿಂದ ಸಲಹೆಗಳು ಸಿಕ್ಕಿವೆ ಎಂದು ಹೇಳಿದರು. ಇದನ್ನೂ ಓದಿ: ಕ್ಯಾನ್ಸರ್ ರೋಗ 4ನೇ ಹಂತ ತಲುಪಿದಾಗ ಏನಾಗುತ್ತೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗ್ಬೇಕು: ವಿನಯ್ ಗುರೂಜಿ
ಇದು ಖುಷಿಯ ವಿಚಾರ ಅಲ್ಲ. ಆದರೆ ಈ ಕೇಸಿನಲ್ಲಿ ಐದು ಮಂದಿಯನ್ನು ಅರೆಸ್ಟ್ ಮಾಡಿದ್ದೇವೆ. ಈ 5 ಮಂದಿ ಯಾರೆಂಬುದನ್ನು ಕೋರ್ಟ್ ಆದೇಶದಂತೆ ಬಹಿರಂಗಪಡಿಸಲ್ಲ. ಆರೋಪಿಗಳೆಲ್ಲರೂ ಕೂಲಿ ಕಾರ್ಮಿಕರು ಆಗಿದ್ದಾರೆ. ಇನ್ನೂ ತನಿಖೆ ನಡೆಸಿ ಮಾಹಿತಿ ತಿಳಿಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಇದು ಸಾಧ್ಯವಿಲ್ಲ. ಪ್ರಾಥಮಿಕ ಮೂಲಗಳ ಪ್ರಕಾರ ಓರ್ವ ಅಪ್ರಾಪ್ತ(17 ವರ್ಷ) ಎಂಬುದಾಗಿ ತಿಳಿದುಬಂದಿದೆ. ಕೆಲಸಕ್ಕೋಸ್ಕರ ಎರಡು ಸಲ ಮೈಸೂರಿಗೆ ಬರುತ್ತಿದ್ದರು. ಹೀಗೆ ಬಂದು ಹೋಗುವ ಮುನ್ನ ಕುಡಿದು ಪಾರ್ಟಿ ಮಾಡಿ ಹೋಗುತ್ತಿದ್ದರು ಎಂದು ವಿವರಿಸಿದರು. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ
ಇದೇ ವೇಳೆ ಪೊಲೀಸರ ತಂಡಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಡಿಜಿಪಿ ತಿಳಿಸಿದ್ದಾರೆ. ಇಂತಹ ಪ್ರಕರಣವನ್ನು ಪತ್ತೆ ಮಾಡಲು ಸಮಯ ಬೇಕಾಗುತ್ತದೆ. ಆರೋಪಿಗಳು ಗೊತ್ತಿದ್ದರೆ 4 ಗಂಟೆಯೂ ಕಾಯಬೇಕಿಲ್ಲ. ಆದರೆ ಈ ರೀತಿಯ ಘಟನೆಗಳಲ್ಲಿ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಮೂಲಕ ಪತ್ತೆ ಕಾರ್ಯ ನಡೆಸಬೇಕಾಗುತ್ತದೆ ಎಂದು ಹೇಳುವ ಮೂಲಕ ಆರೋಪಿಗಳ ಪತ್ತೆ ತಡಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ಆರೋಪಕ್ಕೆ ಡಿಜಿಪಿ ಸ್ಪಷ್ಟನೆ ನೀಡಿದರು.