– ಪಂಜಾಬ್ ಪ್ಲೇ ಆಫ್ ಕನಸು ಜೀವಂತ
– 5ನೇ ಸ್ಥಾನಕ್ಕೆ ಜಾರಿದ ಕೋಲ್ಕತ್ತಾ
ಶಾರ್ಜಾ: ಕ್ರೀಸ್ ಗೇಲ್ ಸ್ಫೋಟಕ ಬ್ಯಾಟಿಂಗ್ ಮತ್ತು ಮನ್‌ದೀಪ್ ಸಿಂಗ್ ಅವರ ಅರ್ಧಶತಕದಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕೋಲ್ಕತ್ತಾ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ.
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 9 ವಿಕೆಟ್ ನಷ್ಟಕ್ಕೆ 149 ರನ್ ಹೊಡೆಯಿತು. ಸುಲಭದ ಸವಾಲನ್ನು ಬೆನ್ನಟ್ಟಿದ್ದ ಪಂಜಾಬ್ 18.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 150 ರನ್ ಹೊಡೆಯಿತು.
Advertisement
Advertisement
12 ಪಂದ್ಯಗಳಿಂದ -0.049 ನೆಟ್ ರನ್ ರೇಟ್ ಹೊಂದಿರುವ ಪಂಜಾಬ್ ಈಗ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. ಅಷ್ಟೇ ಅಂಕಗಳಿಸಿರುವ ಕೋಲ್ಕತ್ತಾ -0.479 ನೆಟ್ ರನ್ ರೇಟ್‌ನೊಂದಿಗೆ 5ನೇ ಸ್ಥಾನಕ್ಕೆ ಜಾರಿದೆ.
Advertisement
ಒಟ್ಟು 12 ಪಂದ್ಯದಲ್ಲಿ ಕ್ರಿಸ್ ಗೇಲ್ ಕೊನೆಯ 5 ಪಂದ್ಯ ಮಾತ್ರ ಆಡಿದ್ದರು. ಈ ಎಲ್ಲ ಪಂದ್ಯಗಳನ್ನು ಪಂಜಾಬ್ ಗೆದ್ದಿರುವುದು ವಿಶೇಷ. ರಾಹುಲ್ ಔಟಾದಾಗ ತಂಡದ ಮೊತ್ತ 47 ಆಗಿತ್ತು ಎರಡನೇಯವರಾಗಿ ಕಣಕ್ಕೆ ಇಳಿದ ಗೇಲ್ 51 ರನ್( 29 ಎಸೆತ, 2 ಬೌಂಡರಿ, 5 ಸಿಕ್ಸರ್) ಚಚ್ಚಿ ಔಟಾದರು. ಎರಡನೇ ವಿಕೆಟಿಗೆ ಮನ್‌ದೀಪ್ ಸಿಂಗ್ ಜೊತೆ 100 ರನ್‌ಗಳ ಜೊತೆಯಾಟವಾಡಿದರು.
ನಾಯಕ ಕೆಎಲ್ ರಾಹುಲ್ 28 ರನ್, ಮನ್‌ದೀಪ್ ಸಿಂಗ್ ಔಟಾಗದೇ 66 ರನ್( 56 ಎಸೆತ, 8 ಬೌಂಡರಿ, 2 ಸಿಕ್ಸರ್ ) ಹೊಡೆದರು.
ಕೋಲ್ಕತ್ತಾ ಪರ ಶುಭಮನ್ ಗಿಲ್ 57 ರನ್(45 ಎಸೆತ, 3 ಬೌಂಡರಿ, 4 ಸಿಕ್ಸರ್) ಹೊಡೆದರೆ ನಾಯಕ ಮಾರ್ಗನ್ 40 ರನ್(25 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಪಂಜಾಬ್ ಪರ ಮೊಹಮ್ಮದ್ ಶಮಿ 35 ರನ್ ನೀಡಿ 3 ವಿಕೆಟ್ ಕಿತ್ತರೆ, ಜೋರ್ಡಾನ್ ಮತ್ತು ರವಿ ಬಿಶ್ನೋಯ್ ತಲಾ 2 ವಿಕೆಟ್ ಕಿತ್ತರು.