ಗೆಳೆಯ ಅಕ್ಷಯ್ ಜೊತೆ ರಮೇಶ್ ಪುತ್ರಿ ಮದುವೆ

Public TV
1 Min Read
Ramesh Arvind Daughter Marriage 5

ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ಪುತ್ರಿ ನಿಹಾರಿಕಾ ಮದುವೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ರೆಸಾರ್ಟ್ ನಲ್ಲಿ ನಡೆದಿದೆ. ಗೆಳೆಯ ಅಕ್ಷಯ್ ಜೊತೆ ನಿಹಾರಿಕಾ ಸಪ್ತಪದಿ ತುಳಿದರು.

Ramesh Arvind Daughter Marriage 2

ಕೊರೊನಾ ಹಿನ್ನೆಲೆ ಮದುವೆ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅಕ್ಷಯ್ ಸಿನಿಮಾ ಕ್ಷೇತ್ರದವರಲ್ಲ ಬದಲಿಗೆ ನಿಹಾರಿಕಾ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡೂ ಕುಟುಂಬದವರ ಸಮ್ಮುಖದಲ್ಲಿ ಮದುವೆ ನಡೆದಿದೆ.

Ramesh Arvind Daughter Marriage 3

2021ರ ಜನವರಿ 16ರಂದು ಆರತಕ್ಷತೆ ನಡೆಯಲಿದೆ. ಅಂದು ಚಿತ್ರರಂಗ ಸೇರಿದಂತೆ ಎಲ್ಲ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ನನ್ನ ಮಗಳು ನಿಹಾರಿಕ ಹಾಗೂ ಅಕ್ಷಯ್ ವಿವಾಹ ಇಂದು ನಡೆಯಿತು. ನಿಮ್ಮ ಪ್ರೀತಿಯ ಆಶೀರ್ವಾದ ಈ ಹೊಸ ಜೋಡಿ ಮೇಲೆ ಸದಾ ಇರಲಿ ಎಂದು ರಮೇಶ್ ಅರವಿಂದ್ ವಿನಂತಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *