ಉಡುಪಿ: ಜಿಲ್ಲೆಗೆ ಪ್ರತಿದಿನ 10 ಸಾವಿರ ಡೋಸ್ ಲಸಿಕೆಯನ್ನು ರವಾನಿಸುವುದಾಗಿ ಗೃಹ ಸಚಿವ ಉಡುಪಿ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಆದ್ರೆ ಲಸಿಕೆ ಪೂರೈಕೆ ಸಮರ್ಪಕವಾಗಿ ಆಗುತ್ತಿದೆ. ಜಿಲ್ಲೆ ಈ ವಾರ ಸುಮಾರು 30 ಸಾವಿರ ಡೋಸೇಜ್ ನ ಕೊರತೆ ಅನುಭವಿಸುತ್ತಿದೆ.
ಜಿಲ್ಲೆಗೆ ಪ್ರತಿದಿನ 10 ಸಾವಿರ ಲಸಿಕೆ ಬಂದರೂ ಅದನ್ನ ಒಂದೇ ದಿನದಲ್ಲಿ ಸಾರ್ವಜನಿಕರಿಗೆ ನೀಡಲು ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧವಾಗಿದೆ. ಜಿಲ್ಲೆಯ ಏಳು ತಾಲೂಕಿನಲ್ಲಿ ಲಸಿಕೆ ಅಭಿಯಾನವನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಲು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧವಾಗಿದೆ. ಆದ್ರೆ ಬೇಡಿಕೆ ಪೂರೈಸುವಲ್ಲಿ ಸರ್ಕಾರ ಹಿನ್ನಡೆ ಅನುಭವಿಸಿದೆ.
ಉಡುಪಿ ಜಿಲ್ಲೆಯಲ್ಲಿ ಮೈನಸ್ 5 ಲಸಿಕೆ ನಷ್ಟ
ಉಡುಪಿ ಜಿಲ್ಲೆಯಲ್ಲಿ ವೇಸ್ಟೇಜ್ -5 ಇದೆ. ಅಂದರೆ ಜಿಲ್ಲೆಯಲ್ಲಿ ಶೇಕಡಾ ಐದರಷ್ಟು ನಾವು ಲಸಿಕೆ ಹಂಚಿಕೆಯಲ್ಲಿ ಲಾಭ ಮಾಡಿದ್ದೇವೆ. ಒಂದು ವಯಲಿನ್ ಅಲ್ಲಾ ಡೋಸೇಜನ್ನು ಸಾರ್ವಜನಿಕರಿಗೆ ನೀಡಲು ನಾವು ಯಶಸ್ವಿಯಾಗಿದ್ದೇವೆ. ಯಾವುದೇ ವಯಲ್ ನಲ್ಲಿ ಲಸಿಕೆ ವೇಸ್ಟ್ ಮಾಡುತ್ತಿಲ್ಲ. 10 ಜನ ಸಿದ್ಧವಾಗಿದ್ದರೆ ಮಾತ್ರ ವಯಲ್ ಓಪನ್ ಮಾಡುತ್ತೇವೆ. ವೇಸ್ಟೇಜ್ ಕಡಿಮೆ ಮಾಡಿರುವ ಪೈಕಿ ರಾಜ್ಯದಲ್ಲೇ ನಾವು ಎರಡನೇ ಸ್ಥಾನದಲ್ಲಿದ್ದೇವೆ ವ್ಯಾಕ್ಸಿನೇಷನ್ ಮಾಡುವ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳ ಕಾಳಜಿಯಿಂದ ಇದು ಸಾಧ್ಯವಾಗಿದೆ ಎಂದು ಉಡುಪಿ ಜಿಲ್ಲಾ ಲಸಿಕಾಧಿಕಾರಿ ಡಾ.ರಾಮ್ ಹೇಳಿದರು.
ಜಿಲ್ಲೆಯಲ್ಲಿ 10 ಲಕ್ಷ ಜನರಿಗೆ ವ್ಯಾಕ್ಸಿನೇಷನ್ ಮಾಡುವ ಗುರಿಯನ್ನು ಉಡುಪಿ ಜಿಲ್ಲಾಡಳಿತ ಹೊಂದಿದೆ. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ 5,34,160 ಡೋಸ್ ವ್ಯಾಕ್ಸಿನೇಶನ್ ಆಗಿದೆ. 18ರ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮೊದಲ ಡೋಸ್ ಪಡೆಯದ, ಎರಡನೇ ಡೋಸ್ ಡ್ಯೂ ಇರುವ ಎಲ್ಲಾ ಲೆಕ್ಕಾಚಾರವನ್ನು ತೆಗೆದುಕೊಂಡರೆ 2 ಲಕ್ಷ ಕೊರತೆ ಇದೆ ಎಂದರು. ಇದನ್ನೂ ಓದಿ: 15 ವರ್ಷದ ದಾಂಪತ್ಯ ಅಂತ್ಯ – ವಿಚ್ಛೇದನಕ್ಕೆ ಮುಂದಾದ ಆಮಿರ್ ಖಾನ್, ಕಿರಣ್ ರಾವ್
ಮೂರು ತಿಂಗಳಲ್ಲಿ 15 ಲಕ್ಷ ಲಸಿಕೆ ಬೇಡಿಕೆ
ಮುಂದಿನ ಮೂರುವರೆ ತಿಂಗಳ ಒಳಗೆ 15 ಲಕ್ಷ ಡೋಸೇಜ್ ವ್ಯಾಕ್ಸಿನ್ ಜಿಲ್ಲೆಗೆ ಅಗತ್ಯವಿದೆ. ಕೊರೊನಾದ ಮೂರನೇಯ ಅಲೆ ಅಪ್ಪಳಿಸುವ ಮೊದಲು ಲಸಿಕೆ ಬಂದರೆ ಎಲ್ಲರನ್ನೂ ತಲುಪಲು ಸಾಧ್ಯವಿದೆ. ಇದನ್ನೂ ಓದಿ: ‘ಅ’ ಕಾರಕ್ಕೂ, ‘ಹ’ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ: ಅನಿತಾ ಭಟ್