ಪ್ಯಾರಿಸ್: ಆನ್‍ಲೈನ್ ಜಾಹಿರಾತುಗಳ ಪ್ರದರ್ಶನಕ್ಕೆ ತನ್ನ ಮಾರುಕಟ್ಟೆಯನ್ನು ದುರುಪಯೋಗ ಪಡಿಸಿದ್ದಕ್ಕೆ ಅಮೆರಿಕದ ಗೂಗಲ್ ಕಂಪನಿ ಮೇಲೆ ಫ್ರಾನ್ಸ್ 220 ದಶಲಕ್ಷ ಯೂರೋ(ಅಂದಾಜು 1948 ಕೋಟಿ ರೂ.) ದಂಡವನ್ನು ವಿಧಿಸಿದೆ.
ಫ್ರಾನ್ಸ್‍ನ ಸ್ಪರ್ಧಾ ನಿಯಂತ್ರಕವು ಈ ದಂಡವನ್ನು ವಿಧಿಸಿದ್ದು, ಮುಂದಿನ ದಿನಗಳಲ್ಲಿ ತನ್ನ ಆನ್‍ಲೈನ್ ಜಾಹೀರಾತಿನಲ್ಲಿ ಬದಲಾವಣೆ ಮಾಡಲಾಗುವುದು ಎಂದು ಗೂಗಲ್ ಕಂಪನಿ ತಿಳಿಸಿದೆ.
Advertisement
Advertisement
ಗೂಗಲ್ ಕೆಲವು ಸಾಧನಗಳು ದೊಡ್ಡ ಪ್ರಕಾಶಕರಿಗೆ ಬಹುತೇಕ ಅವಶ್ಯಕವಾಗಿದೆ. ಆದರೆ ಗೂಗಲ್ ತನ್ನ ಮಾರುಕಟ್ಟೆಯನ್ನು ದುರುಪಯೋಗಪಡಿಸಿರುವುದು ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ದಂಡವನ್ನು ಹೇರಲಾಗಿದೆ. ಇದನ್ನೂ ಓದಿ: ಗೂಗಲ್ ಸರ್ಚ್ ನಲ್ಲಿ ಕುವೆಂಪು ಫೋಟೋ ಬಂದಿದ್ದು ಹೇಗೆ? ಇಲ್ಲಿದೆ ಡೂಡಲ್ ಸೃಷ್ಟಿಕರ್ತನ ಕತೆ
Advertisement
ಮೂರು ಮಾಧ್ಯಮ ಕಂಪನಿಗಳಾದ ನ್ಯೂಸ್ ಕಾರ್ಪೋರೇಷನ್, ಲೆ ಫಿಗರೊ ಮತ್ತು ಬೆಲ್ಜಿಯಂನ ಗ್ರೂಪ್ ರೊಸೆಲ್ ಗೂಗಲ್ ಇಂಟರ್ನೆಟ್ ಜಾಹೀರಾತು ಮಾರಾಟವನ್ನು ಏಕಸ್ವಾಮ್ಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು.
Advertisement
ಗೂಗಲ್ ಜಾಹೀರಾತುಗಳು ಬಳಸುವ ವಿಧಾನಗಳು ಅಪಾರದರ್ಶಕವಾಗಿದೆ ಮತ್ತು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ. ಇದು ಅಸಮಾನತೆಯಿಂದ ಕೂಡಿದ್ದು ಅನಿಯಂತ್ರಿತ ರೀತಿಯಲ್ಲಿದೆ ಎಂದು ಹೇಳಿ ಫ್ರಾನ್ಸ್ ಸ್ಪರ್ಧಾ ನಿಯಂತ್ರಕ 2019ರಲ್ಲಿ 150 ದಶಲಕ್ಷ ಯುರೋ(1,327 ಕೋಟಿ ರೂ.) ದಂಡವನ್ನು ವಿಧಿಸಿತ್ತು. ಇದನ್ನೂ ಓದಿ: ಸಿಸ್ಕೋ, ಅಮೆಜಾನ್ 49 ಸಾವಿರ, ಗೂಗಲ್‌ನಲ್ಲಿ 46 ಸಾವಿರ – ಐಟಿ ಇಂಟರ್ನಿಗಳ ತಿಂಗಳ ಸಂಬಳ ಎಷ್ಟು?