ಬೆಂಗಳೂರು: ಇಂದು ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟಪ್ಪ ಅವರ 113 ಜನ್ಮ ವಾರ್ಷಿಕೋತ್ಸವ. ಕುವೆಂಪು ಅವರ ಜನ್ಮದಿನದಂದು ಗೂಗಲ್ ಡೂಡಲ್‍ನಲ್ಲಿ ಅವರ ಚಿತ್ರವನ್ನು ಪ್ರಕಟಿಸಿ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ.
ಡೂಡಲ್ ನಲ್ಲಿ ಕುವೆಂಪು ಚಿತ್ರ ಮೂಡಿ ಬರಲು ಕಾರಣರಾದ ವ್ಯಕ್ತಿ ಉಪಮನ್ಯು ಭಟ್ಟಚಾರ್ಯ. ಕೋಲ್ಕತ್ತಾ ಮೂಲದ ಆನಿಮೇಟರ್ ಆಗಿರುವ ಉಪಮನ್ಯು ಈಗ ಕ್ಯಾಲಿಫೋರ್ನಿಯಾದಲ್ಲಿದ್ದೇನೆ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಗೂಗಲ್ ನಲ್ಲಿ ಕನ್ನಡ ಪದವನ್ನು ಬರೆಯಲು ಇವರಿಗೆ ಹೇಳಿಕೊಟ್ಟವರು ಸ್ವಾತಿ ಶೇಲರ್.
Advertisement
Advertisement
ಕುವೆಂಪು ಅವರ ಜನ್ಮದಿನಕ್ಕೆ ಡೂಡಲ್ ಮಾಡಿಕೊಡಿ ಎಂದು ಗೂಗಲ್ ಅವರು ಕೇಳೀಕೊಂಡಾಗ ನನಗೆ ಇದನ್ನು ನಂಬಲಿಕ್ಕೆ ಸಾಧ್ಯವಿಲ್ಲ. ಈ ಡೂಡಲ್ ನಾನು ಮಾಡಿದ್ದು, ಇದಕ್ಕೆ ಕನ್ನಡ ಪದವನ್ನು ಹಾಕಲು ಸ್ವಾತಿ ಶೇಲರ್ ಸಹಾಯ ಮಾಡಿದ್ದಾರೆ ಹಾಗೂ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಗೂಗಲ್ ಎಂದು ಬರೆಯಲಾಗಿದೆ ಎಂದು ಉಪಮನ್ಯೂ ಭಟ್ಟಚಾರ್ಯ ಬರೆದು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೊಸ್ಟ್ ಮಾಡಿದ್ದಾರೆ.
Advertisement
Advertisement
ಕವಿಶೈಲದ ಪ್ರಕೃತಿಯ ಮಡಲಲ್ಲಿ ಬಂಡೆಯ ಮೇಲೆ ಕುಳಿತು ಕುವೆಂಪು ಸಾಹಿತ್ಯ ಸೃಷ್ಟಿಸುತ್ತಿರುವ ಚಿತ್ರವನ್ನು ಡೂಡಲ್ ಗೆ ಬಳಸಿಕೊಳ್ಳಲಾಗಿದೆ. ಮತ್ತೊಂದು ವಿಶಿಷ್ಟವೇನೆಂದರೆ ಕುವೆಂಪು ಚಿತ್ರದ ಹಿಂಭಾಗದಲ್ಲಿ ಗೂಗಲ್ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಇದನ್ನು ಉಪಮನ್ಯೂ ಭಟ್ಟಚಾರ್ಯ ಬರೆದಿದ್ದು, ಸ್ವಾತಿ ಶೇಲರ್ ಕನ್ನಡ ಪದ ಬರೆಯಲು ಸಹಾಯ ಮಾಡಿದ್ದಾರೆ.
ಯಾವಾಗಲ್ಲೂ ಪ್ರಕೃತಿ ಸೌಂದರ್ಯವನ್ನು ಇಷ್ಟಪಡುತ್ತಿದ್ದ ಕುವೆಂಪು ಅವರಿಗೆ ‘ಪೂವು’ ಎಂಬ ಡೂಡಲ್ ಬಳಸಿಕೊಳ್ಳಲಾಗಿದೆ. ಕುವೆಂಪು ಅವರು ತಮ್ಮ ಕವಿತೆಗಳಲ್ಲಿ ತಮ್ಮ ಸುತ್ತಮುತ್ತಲಿರುವ ಪ್ರಪಂಚದ ಸರಳ ಅದ್ಭುತವನ್ನು, ವಿಶೇಷವಾದ ಹೂವುಗಳಗೆ ಪ್ರತಿಬಿಂಬಿಸಿ ಪ್ರೀತಿಸುತ್ತಿದ್ದರು.
ಕುವೆಂಪು ಅವರು 1904ರ ಡಿಸೆಂಬರ್ 29ರಂದು ಜನಿಸಿದ್ದು, ರಾಮಾಯಣ ದರ್ಶನಂ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ನವೆಂಬರ್ 11, 1994ರಲ್ಲಿ ಕುವೆಂಪು ವಿಧಿವಶರಾದ್ರು.
ಉಪಮನ್ಯು ಭಟ್ಟಚಾರ್ಯ ಅವರು ಅನಿಮೇಷನ್ ಮೂಲಕ ಬೇರೆ ಬೇರೆ ಫೋಟೋಗಳನ್ನು ರಚಿಸಿದ್ದು ಅವುಗಳನ್ನು ಇಲ್ಲಿ ನೀಡಲಾಗಿದೆ.