ನವದೆಹಲಿ: ಕಳೆದ 24 ಗಂಟೆಯಲ್ಲಿ 56,383 ಮಂದಿ ಕೊರೊನಾ ಸೋಂಕಿನಿಂದ ಗುಣಮುಖವಾಗಿದ್ದು ಈವರೆಗೂ ದಿನವೊಂದಕ್ಕೆ ಗುಣಮುಖವಾದರ ಸಂಖ್ಯೆಯಲ್ಲಿ ಇದು ಅತಿ ಹೆಚ್ಚು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಈ ಮೂಲಕ ದೇಶದಲ್ಲಿ ಸೋಂಕಿನಿಂದ ಗುಣಮುಖವಾದ ಸಂಖ್ಯೆ 17 ಲಕ್ಷದ (16,95,982) ಸನಿಹದಲ್ಲಿದೆ. ಸಾವಿನ ಸಂಖ್ಯೆಯಲ್ಲೂ ನಿಯಂತ್ರಣ ಸಾಧಿಸಿದ್ದು 1.96% ಪ್ರಮಾಣಕ್ಕೆ ಇಳಿಕೆ ಕಂಡಿದೆ.
ಬುಧವಾರ ಒಂದೇ ದಿನ 66,999 ಮಂದಿಯಲ್ಲಿ ಸೋಂಕು ಪತ್ತೆಯಾದರೆ, ನಿನ್ನೆ ಕೊರೊನಾದಿಂದ 942 ಸಾವನ್ನಪ್ಪಿದ್ದಾರೆ. ಸದ್ಯ 6,53,622 ಸಕ್ರಿಯ ಪ್ರಕರಣಗಳಿದ್ದರೆ ಕೊರೊನಾದಿಂದ ಒಟ್ಟು 16,95,982 ಮಂದಿ ಗುಣಮುಖವಾಗಿದ್ದಾರೆ. ಈವರೆಗೆ ದೇಶದಲ್ಲಿ ಒಟ್ಟು 47,033 ಜನ ಕೊರೊನಾಗೆ ಬಲಿಯಾಗಿದ್ದಾರೆ.
ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಐಸಿಎಂಆರ್ ಪರೀಕ್ಷೆಗಳನ್ನು ಹೆಚ್ಚು ಮಾಡಿದ್ದು, ಬುಧವಾರ ಒಂದೇ ದಿನ. 8,30,391 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದೆ. ಈ ಮೂಲಕ ದೇಶದ ಈವರೆಗೂ 2,68,45,688 ಮಂದಿಗೆ ಪರೀಕ್ಷೆ ನಡೆಸಲಾಗಿದೆ.