ಟೋಕಿಯೋ: ದರೋಡೆಕೋರರ ಗುಂಡೇಟು ತಿಂದು ಸಾವು ಗೆದ್ದ ಬಾಕ್ಸರ್ ಇದೀಗ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಹೆವಿವೇಟ್ ಬಾಕಿಂಗ್ಸ್ ವಿಭಾಗದಲ್ಲಿ ಸ್ಪರ್ಧಿಸಿದ ಕ್ಯೂಬಾದ ಜೂಲಿಯೊ ಲಾ ಕ್ರೂಜ್ ಸತತ ಮೂರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಶುಕ್ರವಾರ ನಡೆದ ಹೆವಿವೇಟ್ ವಿಭಾಗದ ಫೈನಲ್ ಕಾದಾಟದಲ್ಲಿ ರಶ್ಯದ ಮುಸ್ಲಿಮ್ ಗಾಜಿಮಗೊಡೇವ್ ವಿರುದ್ಧ 5-0 ಅಂತರದಲ್ಲಿ ಗೆದ್ದು ಚಿನ್ನಕ್ಕೆ ಕೊರಳೊಡ್ಡಿದರು.
2014ರಲ್ಲಿ ಜೂಲಿಯೊ ಲಾ ಕ್ರೂಜ್ ದರೋಡೆಕೋರರಿಂದ ಬೆನ್ನಿನ ಭಾಗಕ್ಕೆ ಗುಂಡೇಟು ತಿಂದು ಬದುಕುಳಿದಿದ್ದರು. ಆ ಬಳಿಕ ಮತ್ತೆ ಬಾಕ್ಸಿಂಗ್ ಅಖಾಡಕ್ಕೆ ಧುಮುಕಿದ ಕ್ರೂಜ್ 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ 1 ಚಿನ್ನದ ಪದಕ ಪಡೆದಿದ್ದರು. ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕದ ಸಾಧನೆ ಗೈದಿದ್ದಾರೆ.
Hail César! A look at the best moments of Julio César La Cruz's journey to Olympic light-heavyweight gold at Rio 2016. ???????? ????????#StrongerTogether pic.twitter.com/iVpRnGFoEc
— The Olympic Games (@Olympics) August 4, 2021
2014ರಲ್ಲಿ ನಡೆದ ಆ ಘಟನೆ ನನ್ನನ್ನು ತುಂಬಾ ಘಾಸಿಗೊಳಿಸಿತ್ತು. ಆದರು ನಾನು ವಿಶ್ವಾಸ ಕಳೆದುಕೊಳ್ಳಲಿಲ್ಲ. ಈ ಚಿನ್ನದ ಬೇಟೆ ಮುಂದಿನ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಮುಂದುವರಿಸುವ ಕನಸು ಕಂಡಿದ್ದೇನೆ ಎಂದು ಕ್ರೂಜ್ ಸಂತಸ ಹಂಚಿಕೊಂಡಿದ್ದಾರೆ.