ಗಾಲ್ವಾನ್ ಘುರ್ಷಣೆಯಲ್ಲಿ ಮಡಿದ ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ತಾಯಿಗೆ ಸುಧಾಕರ್ ನಮನ

Public TV
1 Min Read
sudhakar santhosh

ಬೆಂಗಳೂರು: ಚೀನಾ ಹಾಗೂಭಾರತದ ನಡುವೆ ಗಾಲ್ವಾನ್ ನಡೆದ ಘರ್ಷಣೆಯಲ್ಲಿ ಹತಾತ್ಮನಾದ ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ತಾಯಿಗೆ ವೈದ್ಯಕೀಯ ಸಚಿವ ಸುಧಾಕರ್ ನಮನಗಳನ್ನು ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಸಚಿವರು, ಗಾಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬುರವರ ತಾಯಿಯ ಮಾತು, “ತಾಯಿಯಾಗಿ ನಾನು ತುಂಬಾ ದುಃಖಿತಳಾಗಿದ್ದೇನೆ, ಆದರೂ ನನ್ನ ಮಗ ದೇಶವನ್ನು ರಕ್ಷಿಸುವಾಗ ಹುತಾತ್ಮನಾದ ಎಂದು ನನಗೆ ಹೆಮ್ಮೆ ಇದೆ!” ಆ ಧೀರ ತಾಯಿಗೆ ನಮನಗಳು.

ಪ್ರತಿ ಭಾರತೀಯ ಸೈನಿಕನ ಹಿಂದೆ ಆತನ ಕುಟುಂಬ ಮತ್ತು ಭಾರತೀಯರ ದೇಶಭಕ್ತಿಯ ಶಕ್ತಿಯಿದೆ. ಜೈ ಹಿಂದ್ ಎಂದು ಬರೆದುಕೊಂಡು ತಾಯಿ ಮಾತನಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.

ತಾಯಿ ಹೇಳಿದ್ದೇನು..?
ಮಾಧ್ಯಮಗಳ ಜೊತೆ ಮಾತನಾಡಿದ್ದ ಕರ್ನಲ್ ಸಂತೋಷ್ ಬಾಬು ಅವರ ತಾಯಿ ಮಂಜುಳಾ, ನನ್ನ ಸೊಸೆ ಹಾಗೂ ಮೊಮ್ಮಕ್ಕಳು ದೆಹಲಿಯಲ್ಲೇ ಇರುತ್ತಾರೆ. ಮಗನ ಸಾವಿನ ಸುದ್ದಿ ಕೇಳಿ ಒಂದು ಕಡೆ ದುಃಖವಾಗ್ತಿದೆ. ಮತ್ತೊಂದು ಕಡೆ ಸಂತೋಷವಾಗ್ತಿದೆ. ದೇಶಕ್ಕಾಗಿ ಮಗ ಪ್ರಾಣ ಕೊಟ್ಟ ಅನ್ನೋದು ಒಂದೆಡೆಯಾದರೆ, ಮಗನ ಅಗಲಿಕೆ ನೋವಿನ ಸಂಗತಿಯಾಗಿದೆ. ನನಗೆ ಇರುವುದು ಒಬ್ಬನೇ ಮಗ ಎಂದು ಕಣ್ಣೀರಾದರು.

ಮಗನ ಸಾವಿನ ಸುದ್ದಿ ಸೊಸೆಗೆ ಸೋಮವಾರ ರಾತ್ರಿಯೇ ತಿಳಿದಿತ್ತು. ಆದರೆ ನಾನು ಆಘಾತಕ್ಕೆ ಒಳಗಾಗುತ್ತೇನೆ ಎಂದು ಹೇಳಿರಲಿಲ್ಲ. ಈಗ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಭಾವುಕರಾದರು.

Santosh Babu mother A

ಹುತಾತ್ಮ ಕರ್ನಲ್ ಸಂತೋಷ್ ಬಾಬು ತೆಲಂಗಾಣದ ಸೂರ್ಯಪೇಟೆ ನಿವಾಸಿ. ಸಂತೋಷ್ ಅವರಿಗೆ 9 ವರ್ಷದ ಮಗಳು ಅಭಿಜ್ಞಾ ಮತ್ತು ಮಗ ನಾಲ್ಕು ವರ್ಷದ ಅನಿಲ್ ತೇಜ್ ಇದ್ದಾರೆ. ಸಂತೋಷ್ ಪ್ರಾಥಮಿಕ ಶಿಕ್ಷಣವನ್ನು ಸೂರ್ಯಪೇಟ್‍ನಲ್ಲಿ ಮುಗಿಸಿ ಪುಣೆಯಲ್ಲಿ ಡಿಗ್ರಿ ಮಾಡಿದ್ದರು. ಬಳಿಕ ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂತೋಷ್ ಅವರು ಮೊದಲು ತಮ್ಮ ದೇಶಸೇವೆ ಆರಂಭಿಸಿದ್ದರು. ಇತ್ತೀಚೆಗೆ ಹೈದರಾಬಾದ್‍ಗೆ ವರ್ಗಾವಣೆ ಕೇಳಿದ್ದರು. ಆದರೆ ನಡೆಸಿ ಕುತಂತ್ರಕ್ಕೆ ಸಂತೋಷ್ ಬಾಬು ಹುತಾತ್ಮರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *