ಗಾಂಧಿ ಕುಟುಂಬ ಮೌನವಾಗಿರೋದು ಏಕೆ?-ಕಮಲ್‍ನಾಥ್ ಹೇಳಿಕೆಗೆ ಸ್ಮೃತಿ ಇರಾನಿ ಕಿಡಿ

Public TV
2 Min Read
Smriti irani

ಭೋಪಾಲ್: ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಕಮಲ್‍ನಾಥ್ ವಿವಾದಾತ್ಮಕ ಹೇಳಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಷಯದಲ್ಲಿ ಗಾಂಧಿ ಕುಟುಂಬ ಏಕೆ ಮೌನವಾಗಿದೆ ಎಂದು ಪ್ರಶ್ನಿಸಿದ್ದಾರೆ.

ಒಬ್ಬ ಮಹಿಳಾ ರಾಜಕಾರಣಿ ವಿರುದ್ಧ ಕಮಲ್‍ನಾಥ್ ಪಂತ್ ಹೇಳಿಕೆ ಆಕ್ಷೇಪಾರ್ಹ ಪದ ಏಕೆ ಬಳಸಿದರು ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ಆದ್ರೆ ಈ ವಿಷಯದಲ್ಲಿ ಗಾಂಧಿ ಪರಿವಾರದವರು ಮೌನವಾಗಿರೋದು ಆಶ್ಚರ್ಯವುನ್ನುಂಟು ಮಾಡಿದೆ. ಇದುವರೆಗೂ ಗಾಂಧಿ ಕುಟುಂಬ ಕಮಲ್‍ನಾಥ್ ಬಳಿ ಹೇಳಿಕೆಗೆ ಸ್ಪಷ್ಟನೆ ಕೇಳಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಮಲ್‍ನಾಥ್ ಹೇಳಿದ್ದೇನು?: ಕಾಂಗ್ರೆಸ್ ನಿಂದ ಗ್ವಾಲಿಯರ್ ನ ದಬ್ರಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಇಮರ್ತಿ ದೇವಿ ಸದ್ಯ ಶಿವರಾಜ್ ಸಿಂಗ್ ಚೌಹಾಣ್ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆಯಾಗಿದ್ದಾರೆ. ಈಗ ಹಾಲಿ ಕ್ಷೇತ್ರದಿಂದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.

https://twitter.com/ShobhaBJP/status/1317839445576404998

ನಿನ್ನೆ ದಬ್ರಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೆ ಅವರ ಪರ ಮತ ಯಾಚನೆ ಮಾಡುತ್ತಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲ್ ನಾಥ್, ನಮ್ಮ ಅಭ್ಯರ್ಥಿ ಸುರೇಶ್ ರಾಜೆ ಸರಳ ವ್ಯಕ್ತಿ ಆಗಿದ್ದು ಆಕೆಯಂಥಲ್ಲ. ಆಕೆಯ ಹೆಸರೇನು? ನಿಮಗೆಲ್ಲರಿಗೂ ಆಕೆಯ ಬಗ್ಗೆ ನನಗಿಂತ ಚೆನ್ನಾಗಿ ಗೊತ್ತಿದೆ. ನೀವು ನನಗೆ ಮೊದಲೇ ಎಚ್ಚರಿಕೆ ನೀಡಬೇಕಾಗಿತ್ತು. ಎಂತಹ ‘ಐಟಂ’ ಎಂದು ಕುಹಕವಾಡಿದ್ದರು.

ಕಮಲ್‍ನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇಮರ್ತಿ ದೇವಿ, ಬಂಗಾಳದಿಂದ ಬಂದ ಈ ವ್ಯಕ್ತಿಗಳಿಗೆ ಮಧ್ಯ ಪ್ರದೇಶದಲ್ಲಿರುವ ಹಕ್ಕು ಇಲ್ಲ. ಮಧ್ಯ ಪ್ರದೇಶದಲ್ಲಿ ಮಹಿಳೆಯರನ್ನ ಅತ್ಯಂತ ಗೌರವದಿಂದ ಕಾಣಲಾಗುತ್ತಿದೆ. ಮಹಿಳೆಯರನ್ನ ಮನೆಯ ಲಕ್ಷ್ಮಿ ಎಂದು ಕರೆಯಲಾಗು ತ್ತದೆ. ಇಂದು ಕಮಲ್‍ನಾಥ್ ಮಧ್ಯಪ್ರದೇಶ ಎಲ್ಲ ಮಹಿಳೆಯರನ್ನ ಕಮಲ್‍ನಾಥ್ ನಿಂದಿಸಿದ್ದಾರೆ. ಕಾಂಗ್ರೆಸ್ ನಲ್ಲಿರುವ ಇಂತಹ ಹೊಲಸನ್ನು ಕೈ ಅಧಿನಾಯಕಿ ಸೋನಿಯಾಗಾಂಧಿ ತೆಗೆದು ಹಾಕಬೇಕು. ನೀವು ಒಬ್ಬರು ಮಹಿಳೆ, ಮಗಳು, ತಾಯಿ. ಹಾಗಾಗಿ ಕಮಲ್‍ನಾಥ್ ಅವರನ್ನ ನಿಮ್ಮ ಪಕ್ಷದಿಂದ ಕೈ ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

kamalnath

ವಿಶೇಷ ಏನೆಂದರೆ ಕಮಲ್ ನಾಥ್ ಸರ್ಕಾರದಲ್ಲಿ ಕೂಡ ಇಮರ್ತಿ ದೇವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ನಿರ್ವಹಿಸುತ್ತಿದ್ದರು. ಏಳು ತಿಂಗಳ ಹಿಂದೆ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಜೊತೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರಿಂದ ಕಮಲ್ ನಾಥ್ ಸರ್ಕಾರ ಪತನಗೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *