ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾದ ಮೊದಲ ಫಸ್ಟ್‌ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಚಿತ್ರತಂಡ ಸಣ್ಣ ಸಣ್ಣ ವಿಡಿಯೋ ರಿಲೀಸ್ ಮಾಡುವ ಮೂಲಕ ಸದ್ದು ಮಾಡುತ್ತಿತ್ತು. ಇದೀಗ ಚಿತ್ರದ ನಾಯಕನ ಫಸ್ಟ್‌ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
#vikranthRona#TheWorldOfPhantom pic.twitter.com/M52TvlKc3w
— Kichcha Sudeepa (@KicchaSudeep) August 10, 2020
ನಿರ್ದೇಶಕ ಅನೂಪ್ ಭಂಡಾರಿ ಅವರು ಇಂದು ಸಿನಿಮಾದ ಫಸ್ಟ್‌ಲುಕ್ ರಿಲೀಸ್ ಮಾಡುವ ಬಗ್ಗೆ ಭಾನುವಾರವೇ ಮಾಹಿತಿ ನೀಡಿದ್ದರು. ಅದರಂತೆಯೇ ಇಂದು ಅಭಿಮಾನಿಗಳಿಗೆ ಟ್ವಿಟ್ಟರಿನಲ್ಲಿ ವಿಕ್ರಾಂತ್ ರೋಣನ ದರ್ಶನ ಮಾಡಿಸಿದ್ದಾರೆ. ರಿಲೀಸ್ ಆಗಿರುವ ಪೋಸ್ಟರ್ ಅದ್ಭುತವಾಗಿ ಮೂಡಿ ಬಂದಿದ್ದು, ಸುದೀಪ್ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.
Here's a little introduction to #VikranthRona's character! Poster will be shared in the next tweet! @WorldofPhantom – The official twitter handle for #Phantom @KicchaSudeep @shaliniartss #VikranthRonaFirstLook pic.twitter.com/2D6OibJ2ib
— Anup Bhandari (@anupsbhandari) August 10, 2020
ಫ್ಯಾಂಟಮ್ ಕೋಟೆಯ ಬಾಗಿಲಲ್ಲಿ ಪಿಸ್ತೂಲ್ ಹಿಡಿದು ಸುದೀಪ್ ಕುಳಿತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಮೊತ್ತೊಂದು ಕಡೆ ಚಾಟಿ ಇರುವುದನ್ನು ನೋಡಬಹುದು. ಆ ಕೋಟೆಯ ಮೇಲೆ ದಿ ವರ್ಲ್ಡ್ ಆಫ್ ಫ್ಯಾಂಟಮ್‍ಗೆ ಸ್ವಾಗತ ಎಂದು ಬರೆಯಲಾಗಿದೆ. ಇನ್ನೂ ಕೆಳಗೆ ಬಾದ್‍ಷಾ ವಿಕ್ರಾಂತ್ ರೋಣ ಆಗಿ ಕಿಚ್ಚ ಸುದೀಪ್” ಎಂದು ಬರೆಯಲಾಗಿದೆ.
And #VikranthRona is back on duty! @KicchaSudeep sir’s first shot today backed by #WilliamDavid’s cinematography, #ShivaKumar’s amazing artwork, @AJANEESHB ‘s BGM & producer @JackManjunath sir’s passion. Hope you all liked it! #PhantomBegins https://t.co/7UFZKdkXAt
— Anup Bhandari (@anupsbhandari) July 19, 2020
“ವಿಕ್ರಾಂತ್ ರೋಣನ ಹೆಸರಲ್ಲಿ ಎಷ್ಟು ಪವರ್ ಇದಿಯೋ ಆ ಪಾತ್ರ ಕೂಡ ಅಷ್ಟೇ ಪವರ್ ಫುಲ್ ಆಗಿದೆ. ವಿಕ್ರಾಂತ್ ರೋಣ ಏನು ಮಾಡುತ್ತಾನೆ, ಹೇಗೆ, ಏಕೆ ಮಾಡುತ್ತಾನೆ ಎಂದು ಯಾರಿಗೂ ಅರ್ಥವಾಗುವುದಿಲ್ಲ. ಆದರೆ ಅವನು ಏನೇ ಮಾಡಿದರೂ ಅದಕ್ಕೆ ಒಂದು ಕಾರಣ ಇರುತ್ತದೆ” ಎಂದು ನಿರ್ದೇಶಕ ಅನುಪ್ ಭಂಡಾರಿ ಹೇಳುವ ಮೂಲಕ ಪೋಸ್ಟರ್ ರಿಲೀಸ್ ಮಾಡಿದ್ದಾರೆ.