ಬೆಂಗಳೂರು: ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬೆಂಗಳೂರು ಹೊರವಲಯದ ಅತ್ತಿಬೆಲೆಯ ಚೆಕ್ ಪೋಸ್ಟ್ ನಲ್ಲಿ ಇಂದು ಸಾವಿರಾರು ವಾಹನಗಳು ರಾಜ್ಯಕ್ಕೆ ಎಂಟ್ರಿ ನೀಡಿವೆ. ತಮಿಳುನಾಡು, ಕೇರಳದಿಂದ ಈಗಾಗಲೇ ಅನೇಕ ಮಂದಿ ರಾಜ್ಯಕ್ಕೆ ಬಂದಿದ್ದು, ಮತ್ತೆ ಕೊರೊನಾ ಹೆಚ್ಚಾಗುವ ಭೀತಿ ಮತ್ತೆ ಶುರುವಾಗಿದ. ಇಂದು ಬೆಳಗ್ಗೆಯಿಂದ ಗಡಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು.
Advertisement
ಚೆಕ್ ಪೋಸ್ಟ್ ನಲ್ಲಿ ಇಂದು ಬೆಳಗ್ಗೆ ಯಾವುದೇ ಪೊಲೀಸರು ಯಾವುದೇ ರೀತಿಯ ಅಧಿಕಾರಿಗಳ ಚೆಕ್ಕಿಂಗ್ ಸಹ ಇರಲಿಲ್ಲ. ಪಬ್ಲಿಕ್ ಟಿವಿಯಲ್ಲಿ ಈ ಕುರಿತು ಸುದ್ದಿ ಬಿತ್ತರಿಸಿದ ತಕ್ಷಣ ಎಚ್ಚೆತ್ತಕೊಂಡ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ತಪಾಸಣೆಯನ್ನು ಮಾಡಲು ಪ್ರಾರಂಭಿಸಿದರು. ಅಲ್ಲದೆ ಅನ್ಯ ರಾಜ್ಯಗಳಿಂದ ಬರುವವರಿಗೆ ಕೋವಿಡ್ ಟೆಸ್ಟ್ ಮಾಡಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ನೀಡಿದ್ದರೂ ಸಹ ಇಂದು ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ಯಾವುದೇ ವೈದ್ಯಕೀಯ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿರಲಿಲ್ಲ. ಪಬ್ಲಿಕ್ ಟಿವಿ ಸುದ್ದಿ ಬಿತ್ತರ ಮಾಡಿದ ಬೆನ್ನಲ್ಲೇ ಬಂದ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕೋವಿಡ್ ಟೆಸ್ಟ್ ಮಾಡಲು ಮುಂದಾಗಿದ್ದಾರೆ.
Advertisement
Advertisement
ಇದೀಗ ಯಾರೇ ರಾಜ್ಯಕ್ಕೆ ಬಂದರೂ ಸಹ ಬಿಗಿ ಬಂದೋಬಸ್ತ್ ಹಾಗು ತಪಾಸಣೆ ಮಾಡುತ್ತಿದ್ದು. ಜೊತೆಗೆ ತಪಾಸಣೆಗೆ ಮುಂದಾದ ಸಮಯದಲ್ಲಿ ಒಂದು ಕಿಲೋಮೀಟರ್ ಹೆಚ್ಚು ವಾಹನ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.