ಮ್ಯಾಡ್ರಿಡ್: ಅರ್ಜೆಂಟೀನಾದ ಖ್ಯಾತ ಫುಟ್‌ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಒಪ್ಪಂದ ಮಾಡಿಕೊಂಡ ವಿಚಾರ ಈಗ ಬಯಲಾಗಿದೆ.
ಸ್ಪೇನ್ ದೇಶದ ಖ್ಯಾತ ಫುಟ್‌ಬಾಲ್ ತಂಡ ಬಾರ್ಸಿಲೋನಾ ಪರವಾಗಿ ಮೆಸ್ಸಿ ಆಡುತ್ತಿದ್ದಾರೆ. ಈ ತಂಡದ ಪರ ಆಡಲು 33 ವರ್ಷದ ಮೆಸ್ಸಿ 55,52,37,619 ಯುರೋ(ಅಂದಾಜು 4,900 ಕೋಟಿ ರೂ.) ಒಪ್ಪಂದ ಮಾಡಿಕೊಂಡ ವಿಚಾರ ಈಗ ಬೆಳಕಿಗೆ ಬಂದಿದೆ.
Advertisement
Advertisement
ಸ್ಪೇನ್‌ನಲ್ಲಿರುವ ದಿನ ಪತ್ರಿಕೆ ʼಎಲ್ ಮುಂಡೋʼ ತನ್ನ ಮುಖಪುಟದಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು ವಿಶ್ವಾದ್ಯಂತ ಟ್ರೆಂಡಿಂಗ್ ಟಾಪಿಕ್ ಆಗಿದೆ. ಮೆಸ್ಸಿ 2017-2021ರ ನಾಲ್ಕು ಆವೃತ್ತಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ವಿವಿಧ ಖಚಿತ ಮೂಲಗಳಿಂದ ಕಲೆ ಹಾಕಿ ಈ ವರದಿಯನ್ನು ಪ್ರಕಟಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.
Advertisement
Advertisement
ಈ ಒಪ್ಪಂದ ಪತ್ರ 30 ಪುಟಗಳಿದ್ದು, 2017ರಲ್ಲಿ ಮೆಸ್ಸಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ತನ್ನ ಗಳಿಕೆಯಲ್ಲಿನ ಅರ್ಧದಷ್ಟು ಹಣವನ್ನು ಮೆಸ್ಸಿ ತೆರಿಗೆ ರೂಪದಲ್ಲಿ ಸ್ಪೇನ್‌ನಲ್ಲಿ ಪಾವತಿಸಬೇಕಾಗುತ್ತದೆ. ಈ ಪೈಕಿ138 ದಶಲಕ್ಷ ಯುರೋ ಪ್ರತಿ ಸೀಸನ್‌ಗೆ ಸಿಕ್ಕಿದರೆ, ಒಪ್ಪಂದ ಸ್ವೀಕರಿಸಿದ್ದಕ್ಕೆ 11,52,25,000 ಯುರೋ ನವೀಕರಣ ಶುಲ್ಕ, 9 7,79,29,955 ಲಾಯಲ್ಟಿ ಬೋನಸ್ ಸಿಕ್ಕಿದೆ.
ಈ ಒಪ್ಪಂದ ಮುಗಿಯಲು ಇನ್ನು 5 ತಿಂಗಳು ಬಾಕಿ ಇದ್ದು ಮೆಸ್ಸಿ ಈಗಾಗಲೇ 51,15,40,545 ಯುರೋ(ಅಂದಾಜು 45,26,58,86,151 ಕೋಟಿ ರೂ.) ಗಳಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಕೋವಿಡ್ 19ನಿಂದ ಬಾರ್ಸಿಲೋನಾ ಕ್ಲಬ್ ಭಾರೀ ನಷ್ಟಕ್ಕೆ ತುತ್ತಾಗಿದೆ. ಕ್ಲಬ್ ದಶಲಕ್ಷ ಯುರೋ ನಷ್ಟದಲ್ಲಿದ್ದು, ಆಟಗಾರರ ಸಂಬಳ ಪಾವತಿಸಲು ಹೆಣಗಾಡುತ್ತಿದೆ.
El Mundo today, what a bomb. Leo Messi’s contract with Barcelona revealed on front page ???????????? @elmundoes
– €555,237,619 contract [4 years].
– €138m per season fixed + variables.
– €115,225,000 as ‘renewal fee’ just for accepting the contract.
– €77,929,955 loyalty bonus. pic.twitter.com/FK3I34hJta
— Fabrizio Romano (@FabrizioRomano) January 31, 2021