ದುಬೈ: ಕೊರೊನಾದಿಂದಾಗಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಇನ್ನೂ ಕೂಡ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ಈ ನಡುವೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮುಂದಿನ ಟಿ20 ಮತ್ತು ಏಕದಿನ ವಿಶ್ವಕಪ್‍ಗಾಗಿ ಮಹತ್ವದ ಬದಲಾವಣೆಯನ್ನು ಪ್ರಕಟಿಸಿದೆ.
Advertisement
ಐಸಿಸಿ ಮಂಡಳಿಯ ಮಹತ್ವದ ಸಭೆಯಲ್ಲಿ, 2024ರಿಂದ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲಿ 20 ತಂಡಗಳು ಮತ್ತು 2027ರಿಂದ ನಡೆಯಲಿರುವ ಏಕದಿನ ವಿಶ್ವಕಪ್‍ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿದೆ ಎಂಬ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ:ಯುಎಇಯಲ್ಲಿ ಐಪಿಎಲ್ ನಿಗದಿ ಬೆನ್ನಲ್ಲೇ ಟ್ರೋಲ್ ಆದ ಸುರೇಶ್ ರೈನಾ
Advertisement
2021ರ ಟಿ20 ವಿಶ್ವಕಪ್‍ನಲ್ಲಿ ಈಗಾಗಲೇ ನಿರ್ಧರಿಸಿದಂತೆ 8 ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಇದಾದ ಬಳಿಕ 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲಿ 20 ತಂಡಗಳು ಭಾಗವಹಿಸಲಿದೆ ಅದೇ ರೀತಿ 2019ರಲ್ಲಿ ನಡೆದ ಏಕದಿನ ವಿಶ್ವಕಪ್‍ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು. ಆದರೆ ಮುಂದಿನ 2027 ಮತ್ತು 2031ರ ಏಕದಿನ ವಿಶ್ವಕಪ್‍ನಲ್ಲಿ ಒಟ್ಟು 14 ತಂಡಗಳನ್ನು ಆಡಿಸಲು ಐಸಿಸಿ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
Advertisement
Advertisement
ಇದರೊಂದಿಗೆ ಟಿ20 ವಿಶ್ವಕಪ್‍ನ್ನು 2 ವರ್ಷಗಳಿಗೊಮ್ಮೆ ಆಯೋಜಿಸಲು ತೀರ್ಮಾನಿಸಿದೆ. 2024, 2026, 2028 ಮತ್ತು 2030ರ ಟಿ20 ವಿಶ್ವಕಪ್‍ನಲ್ಲಿ 20 ತಂಡಗಳು ಆಡಲಿದ್ದು ಒಟ್ಟು 55 ಪಂದ್ಯಗಳ ಟೂರ್ನಿ ನಡೆಸಲು ಚಿಂತನೆ ನಡೆಸಿದೆ. ಹಾಗೆ ಏಕದಿನ ವಿಶ್ವಕಪ್ 2027 ಮತ್ತು 2031ರಲ್ಲಿ 14 ತಂಡಗಳು ಆಡಲಿದ್ದು ಒಟ್ಟು 54 ಪಂದ್ಯಗಳು ನಡೆಯಲಿದೆ. ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ
2017ರ ಬಳಿಕ ಸ್ಥಗಿತಗೊಂಡಿರುವ ಮಿನಿ ವಿಶ್ವಕಪ್ ಖ್ಯಾತಿಯ ಚಾಂಪಿಯನ್ಸ್ ಟ್ರೋಫಿಯನ್ನು 2025 ಮತ್ತು 2029ರಲ್ಲಿ ಮತ್ತೊಮ್ಮೆ ಆಯೋಜಿಸಲು ತೀರ್ಮಾನಿದ್ದು, ಇದಕ್ಕಾಗಿ ಐಸಿಸಿಯ ಏಕದಿನ ರ್ಯಾಂಕಿಂಗ್‍ನ ಟಾಪ್ 8 ತಂಡಗಳನ್ನು ಆಡಿಸಲು ನಿರ್ಧರಿಸಿದೆ. ಹಾಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಂದ್ಯಗಳನ್ನು ಕೂಡ ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲು ಐಸಿಸಿ ನಿರ್ಧರಿಸಿದೆ.
ಇದರೊಂದಿಗೆ ಅಕ್ಟೋಬರ್ ಮತ್ತು ನವೆಂಬರ್‍ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲು ಬಿಸಿಸಿಐಗೆ ಜೂನ್ 28ರ ವರೆಗೆ ಗಡುವು ನೀಡಿದೆ. ಐಸಿಸಿ ಸಭೆಯಲ್ಲಿ ಬಿಸಿಸಿಐ ವಿಶ್ವಕಪ್ ಆಯೋಜನೆಗೆ ಒಂದು ತಿಂಗಳು ಗಡುವು ನೀಡಬೇಕೆಂದು ವಿನಂತಿಸಿಕೊಂಡಿತ್ತು. ಇದಕ್ಕೆ ಐಸಿಸಿ ಒಪ್ಪಿಕೊಂಡಿದೆ.