ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಕಾವ್ಯಾ ಶಾಸ್ತ್ರಿ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕ್ಯಾನ್ಸರ್ ರೋಗಿಗಳಿಗಾಗಿ ನಾನು ಕೂದಲನ್ನು ದಾನ ಮಾಡಿದ್ದೇನೆ. ಕ್ಯಾನ್ಸರ್‌ನಿಂದ ನನ್ನ ಚಿಕ್ಕಪ್ಪನನ್ನು ಕಳೆದುಕೊಂಡಿದ್ದೇನೆ. ಆ ನೋವನ್ನು ತುಂಬ ಹತ್ತಿರದಿಂದ ಕಂಡಿದ್ದರಿಂದ ಈ ನಿರ್ಧಾಕ್ಕೆ ಬಂದಿದ್ದೇನೆ. ಕೂದಲು ದಾನ ತುಂಬ ಸಣ್ಣ ಕೆಲಸವೇ ಇರಹುದು. ಆದರೆ, ನನ್ನ ಕೆಲಸವನ್ನು ನಾನು ಮಾಡಿದ್ದೇನೆ. ಈ ಒಂದೊಳ್ಳೆ ಕೆಲಸಕ್ಕೆ ನೀವು ಕೈ ಜೋಡಿಸಿ ಎಂದು ಮನವಿ ಮಾಡಿ ಇನ್‍ಸ್ಟಾಗ್ರಾಮ್‍ನಲ್ಲಿ ಕೂದಲು ಕಟ್ ಮಾಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಕೊರೊನಾ ಸಂಕಷ್ಟದ ಪರಿಸ್ತೀತಿಯಲ್ಲಿ ಪ್ಲಾಸ್ಮಾ ದಾನ ಮಾಡಿ ಇತರರಿಗೂ ಮಾದರಿಯಾಗಿದ್ದರು. ಲಾಕ್‍ಡೌನ್ ಸಮಯದಲ್ಲಿ ದಿನಸಿಕಿಟ್, ಆಹಾರದ ಪೊಟ್ಟಣಗಳನ್ನು ಹಂಚಿದ್ದರು. ಇದೀಗ ನಟಿ ಕಾವ್ಯಾ ಶಾಸ್ತ್ರಿ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ್ದಾರೆ.
View this post on Instagram
ಈ ಹಿಂದೆ ಸ್ಯಾಂಡಲ್‍ವುಡ್ ನಟ ದ್ರುವಾ ಸರ್ಜಾ, ನಟಿ ಕಾರುಣ್ಯ ರಾಮ್ ಹೀಗೆ ಅನೇಕ ಮಂದಿ ನಟ, ನಟಿಯರು ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ್ದಾರೆ. ಇದೀಗ ಅದೇ ಸಾಲಿಗೆ ಕಾವ್ಯಾ ಶಾಸ್ತ್ರಿ ಕೂಡ ಸೇರ್ಪಡೆಯಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.