– ಕೋವ್ಯಾಕ್ಸಿನ್ ಲಭ್ಯವಿರುವ ಆಸ್ಪತ್ರೆಗಳ ಪಟ್ಟಿ ಬಿಡುಗಡೆ
ಬೆಂಗಳೂರು: ಕೋವ್ಯಾಕ್ಸಿನ್ ಲಸಿಕೆ ಬೆಂಗಳೂರಿನಲ್ಲಿ ಹಾಹಾಕಾರ ಶುರುವಾಗಿದೆ. ಅದರಲ್ಲೂ ಸೆಕೆಂಡ್ ಡೋಸ್ ಪಡೆಯುವವರಿಗೆ ಲಸಿಕೆ ಸಿಗ್ತಿಲ್ಲ. ಆದರೆ ಲಸಿಕೆ ಪಡೆಯದೇ ಇದ್ದವರಿಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸಿಹಿ ಸುದ್ದಿ ನೀಡಿದ್ದಾರೆ. ಕೋವ್ಯಾಕ್ಸಿನ್ ಲಸಿಕೆ ಎಲ್ಲಿ ಸಿಗುತ್ತೆ ಅಂತಾ ಟ್ವಿಟ್ಟ್ ಮಾಡಿ ತಿಳಿಸಿದ್ದಾರೆ. ಬೆಂಗಳೂರಿನ 27 ಪ್ರಾಥಮಿಕ ಚಿಕಿತ್ಸಾ ಕೇಂದ್ರ ಮತ್ತು ಜನರಲ್ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತೆ ಅಂತಾ ಮಾಹಿತಿ ನೀಡಿದ್ದಾರೆ. ಕೋವ್ಯಾಕ್ಸಿನ್ ಸೆಕೆಂಡ್ ಡೋಸ್ ಪಡೆಯುವವರು ಈ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ನೇರವಾಗಿ ಲಸಿಕೆ ಪಡೆಯಬಹುದು.
ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ 27 ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ಸಿಗಲಿದೆ. ಎಂಟು ವಲಯಗಳಲ್ಲಿ ಲಸಿಕೆ ಸಿಗುವ ಆಸ್ಪತ್ರೆಗಳ ವಿವರ ಇಲ್ಲಿದೆ.
Advertisement
#Covaxin 2nd dose is available at the following 27 select hospitals/PHCs. Walk-in only for those who are due for 2nd dose.
ಕೊವಾಕ್ಸಿನ್ 2ನೇ ಡೋಸ್ ಈ ಕೆಳಗಿನ 27 ಆಸ್ಪತ್ರೆ/ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದೆ. 2ನೇ ಡೋಸಿಗೆ ಕಾಯುತ್ತಿರುವವರು ನೇರವಾಗಿ ವಾಕ್ಇನ್ ಮೂಲಕ ಬರಬಹುದು. #BBMPVaccinationDrive pic.twitter.com/0LQi1zSSmz
— Tushar Giri Nath IAS (@BBMPCOMM) May 30, 2021
Advertisement
1. ಬೊಮ್ಮನಹಳ್ಳಿ ವ್ಯಾಪ್ತಿ
* ಕೋಣನುಕುಂಟೆ ಪ್ರಾಥಮಿಕ ಚಿಕಿತ್ಸಾ ಕೇಂದ್ರ
* ಅರಕೆರೆ ಪ್ರಾಥಮಿಕ ಚಿಕಿತ್ಸಾ ಕೇಂದ್ರ
Advertisement
2. ದಾಸರಹಳ್ಳಿ ವಲಯ ವ್ಯಾಪ್ತಿ
* ನೆಲಮಹೇಶ್ವರಿ ಪಿಹೆಚ್‍ಸಿ ಸೆಂಟರ್
Advertisement
3. ಬೆಂಗಳೂರು ಪೂರ್ವ ವಲಯ
* ಸಿವಿ ರಾಮನ್ ನಗರ ಜನರಲ್ ಆಸ್ಪತ್ರೆ
* ಗಂಗಾನಗರ ಪಿಹೆಚ್‍ಸಿ ಸೆಂಟರ್
* ರಾಬರ್ಟ್ ಸ್ಟ್ರೀಟ್ ಪಿಹೆಚ್‍ಸಿ ಸೆಂಟರ್
* ಕಾಚರಾಕನಹಳ್ಳಿ ಪಿಹೆಚ್‍ಸಿ ಸೆಂಟರ್
* ಶಾಂತಲನಗರ ಯುಪಿಹೆಚ್‍ಸಿ
* ಬೌರಿಂಗ್ ಆಸ್ಫತ್ರೆ
4. ಮಹಾದೇವಪುರ ವಲಯ
* ಕೆ.ನಾರಾಯಣಪುರ ಪ್ರಾಥಮಿಕ ಚಿಕಿತ್ಸಾ ಕೇಂದ್ರ
* ದೊಡ್ಡನಕ್ಕುಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ
5. ಆರ್.ಆರ್ ನಗರ ವಲಯ
* ಮತ್ತಿಕೆರೆ ಪ್ರಾಥಮಿಕ ಚಿಕಿತ್ಸಾ ಕೇಂದ್ರ
* ಕೆಂಗೇರಿ ಸಿಪಿಹೆಚ್‍ಸಿ ಕೇಂದ್ರ
6. ಬೆಂಗಳೂರು ದಕ್ಷಿಣ ವಲಯ
* ವಿದ್ಯಾಪೀಠ ಪ್ರಾಥಮಿಕ ಚಿಕಿತ್ಸಾ ಕೇಂದ್ರ
* ಆಡುಗೋಡಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ
* ದಾಸಪ್ಪ ಆಸ್ಪತ್ರೆ
* ಜಯನಗರ ಜನರಲ್ ಆಸ್ಪತ್ರೆ
* ಬಾಪೂಜಿ ನಗರ ಪಿಹೆಚ್‍ಸಿ
* ಕೆ.ಎಸ್ ಲೇಔಟ್ ಪಿಹೆಚ್‍ಸಿ
7. ಬೆಂಗಳೂರು ಪಶ್ಚಿಮ ವಲಯ
* ವಿಕ್ಟೋರಿಯಾ ಜನರಲ್ ಆಸ್ಪತ್ರೆ
* ಕೆಸಿ ಜನರಲ್ ಆಸ್ಪತ್ರೆ
* ಹೊಸಹಳ್ಳಿ ಯುಪಿಹೆಚ್‍ಸಿ
* ಶಂಕರ್ ನಗರ ಯುಪಿಹೆಚ್‍ಸಿ
* ರಾಜಾಜಿನಗರ ಯುಪಿಹೆಚ್‍ಸಿ
* ಪಿಜಿ ಹಳ್ಳಿ ಪಿಹೆಚ್‍ಸಿ
8. ಯಲಹಂಕ ವಲಯ
* ತಿಂಡ್ಲು ಯುಪಿಹೆಚ್‍ಸಿ
* ಎಂಎಸ್ ಪಾಳ್ಯ ಪಿಹೆಚ್‍ಸಿ