ಧಾರವಾಡ: ಕೋವ್ಯಾಕ್ಸಿನ್ ಬಗ್ಗೆ ವಿರೋಧ ಮಾಡಿದವರಿಗೆಲ್ಲ ಈಗ ಸತ್ಯದ ಅರಿವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲೇ ಕೋವಿಡ್ ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿದ್ದರು, ಅಡೆ ತಡೆ ಹಾಕಿ ಭಯ ಹುಟ್ಟಿಸದಿದ್ದರೆ ಲಸಿಕೆ ಇನ್ನೂ ಜಾಸ್ತಿ ಆಗುತ್ತಿತ್ತು. ಕೋವ್ಯಾಕ್ಸಿನ್ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದರು. ಆದರೆ ಈಗ ಕೋವ್ಯಾಕ್ಸಿನ್ ಸೇಫ್ ಎಂದು ಗೊತ್ತಾಗಿದೆ. ಅತೀ ಕೆಟ್ಟದಾದ ಪ್ರತಿಕ್ರಿಯೆಗಳನ್ನು ನಾವು ಎದುರಿಸಬೇಕಾಯಿತು. ಕೋವಿಶೀಲ್ಡ್ ತಯಾರಿಗೆ ಕಚ್ಚಾ ವಸ್ತುಗಳು ವಿದೇಶದಿಂದ ಬರಬೇಕು, ಅದು ಸಹ ಬರುತ್ತೆ. ಕೋವ್ಯಾಕ್ಸಿನ್ ಉತ್ಪಾದನೆ ಆಗುತ್ತಿದೆ ಎಂದರು.
ಸಚಿವ ಉಮೇಶ ಕತ್ತಿ ಅಕ್ಕಿ ಕೊಡುವ ವಿಚಾರವಾಗಿ ಹೇಳಿಕೆ ನೀಡಿದ್ದರ ಕುರಿತು ಮಾತನಾಡಿದ ಅವರು, ಕೇಂದ್ರದಿಂದ ಒಟ್ಟು 5 ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. ಇತ್ತೀಚೆಗೆ ಸಚಿವ ಉಮೇಶ ಕತ್ತಿ ನನಗೆ ಅಧಿವೇಶನ ನಡೆದಾಗ ಭೇಟಿಯಾಗಿದ್ದರು. ಸ್ಥಳೀಯವಾಗಿ ಜೋಳ, ರಾಗಿ ಕೊಡಲು ಅನುಮತಿ ಕೇಳಿದ್ದರು, ಹೀಗಾಗಿ ಐದು ಕೆ.ಜಿ.ಯಲ್ಲಿ ಇನ್ನು 3 ಕೆ.ಜಿ ಜೋಳ ಅಥವಾ ರಾಗಿ ಕೊಡುತ್ತಾರೆ ಎಂದು ಹೇಳಿದರು ಎಂದರು.
ಕೇಂದ್ರ ಆರೋಗ್ಯ ಸಚಿವರು ಕೋವಿಡ್ ಬಗ್ಗೆ ಮಾತನಾಡದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಒಂದು ಸಿಸ್ಟಮ್ ಇದೆ, ಸೆಕ್ರೆಟರ್ ಮತ್ತು ಒಬ್ಬ ವಕ್ತಾರರನ್ನು ಫಿಕ್ಸ್ ಮಾಡಿರುತ್ತೇವೆ. ರಾಜ್ಯ ಮಂತ್ರಿಗಳು ಬೇರೆ ಸ್ಟೆಟ್‍ಮೆಂಟ್ ಕೊಡುತ್ತಾರೆ. ಆ ರೀತಿ ಭಾರತ ಸರ್ಕಾರದಲ್ಲಿ ವ್ಯವಸ್ಥೆ ಇಲ್ಲ. ಇಂಥ ಸಮಯದಲ್ಲಿ ವಕ್ತಾರರನ್ನು ನೇಮಕ ಮಾಡಿರುತ್ತೇವೆ. ಕೇಂದ್ರ ಸಚಿವವರು ರಾಜ್ಯಗಳ ಆರೋಗ್ಯ ಸಚಿವರ ಜೊತೆ ಮಾತನಾಡುತಿದ್ದಾರೆ, ಮುಖ್ಯಮಂತ್ರಿಗಳ ಜೊತೆ ಕೂಡಾ ಮಾತನಾಡುತಿದ್ದಾರೆ. ಕೇಂದ್ರದ ಆರೋಗ್ಯ ಮಂತ್ರಿ ಸಮರ್ಥ ಮಂತ್ರಿಗಳಾಗಿದ್ದಾರೆ ಎಂದರು.