ಚೆನ್ನೈ: ಕೊರೊನಾ ವೈರಸ್‍ನಿಂದ ವಿಶ್ವದಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ ಮತ್ತು ಅನೇಕ ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಈ ಮಧ್ಯೆ ಕೆಲವರು ತಮಗೆ ಮತ್ತು ಇತರರಿಗೆ ಉತ್ಸಾಹ ತುಂಬಲು ಕೊರೊನಾ ವಿರುದ್ಧ ಹೋರಾಟ ಮುಂದುವರೆಸುವುದಕ್ಕೆ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.
Advertisement
ಇದಕ್ಕೆ ಸಾಕ್ಷಿ ಎಂಬಂತೆ ಚೆನ್ನೈ ರೈಲ್ವೆ ಪೊಲೀಸ್ ಅಧಿಕಾರಿಗಳು ‘ಎಂಜಾಯ್ ಎಂಜಾಮಿ’ ಎಂಬ ಜನಪ್ರಿಯ ತಮಿಳು ಹಾಡಿಗೆ ರೈಲ್ವೆ ನಿಲ್ದಾಣದಲ್ಲಿ ನೃತ್ಯ ಮಾಡಿದ್ದಾರೆ.
Advertisement
ಈ ವಿಡಿಯೋವನ್ನು ತಮಿಳುನಾಡಿನ ಪ್ರೆಸ್ ಇನ್‍ಫಾರ್ಮೆಷನ್ ಬ್ಯೂರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಅಧಿಕಾರಿಗಳು ಚೆನ್ನೈ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್ ಮತ್ತು ಗ್ಲೌವ್ಸ್ ಧರಿಸಿ ಹಾಡಿಗೆ ನೃತ್ಯ ಮಾಡುತ್ತಾರೆ. ಈ ನೃತ್ಯ ಪ್ರದರ್ಶನವನ್ನು ವೀಕ್ಷಿಸಲು ಜನರು ಕೂಡ ಒಟ್ಟಿಗೆ ಸೇರಿರುವುದನ್ನು ಕಾಣಬಹುದಾಗಿದೆ.
Advertisement
Chennai Railway Police viral dance performance to popular Enjaai Enjaami song to raise awareness about #COVID19 at MGR Chennai Central Railway station.@MoHFW_INDIA @COVIDNewsByMIB @RailMinIndia @GMSRailway @RPF_INDIA @rpfsrmas @arunkumar783 @Subramanian_ma @RAKRI1 @PIB_India pic.twitter.com/gyoh5Z36X1
— PIB in Tamil Nadu ???????? (@pibchennai) May 9, 2021
Advertisement
ತಮಿಳಿನ ‘ಎಂಜಾಯ್ ಎಂಜಾಮಿ’ ಹಾಡನ್ನು ಧೀರವರು ಹಾಡಿದ್ದು, ಅರಿವು ಎಂಬವರು ಗೀತೆಯನ್ನು ರಚಿಸಿದ್ದಾರೆ.