ಮಡಿಕೇರಿ: ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದನ್ನು ಕಡ್ಡಾಯಗೊಳಿಸಿದ್ದರೂ ಆ ನಿಯಮವನ್ನು ಉಲ್ಲಂಘಿಸಿದ್ದ ಹತ್ತು ಅಂಗಡಿಗಳನ್ನು ಮಡಿಕೇರಿ ನಗರಸಭೆ ಮುಚ್ಚಿಸಿದೆ. ಮಡಿಕೇರಿ ನಗರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿದ್ದು, ನಿಯಂತ್ರಿಸುವುದಕ್ಕಾಗಿ ನಗರಸಭೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
Advertisement
ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಮಾಡಬೇಕಾದರೆ ವ್ಯಾಪಾರಿಗಳು ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು ಎಂದು ಕಳೆದ ವಾರ ನಗರಸಭೆ ತಿಳಿಸಿತ್ತು. ಹೀಗಾಗಿ ಇಂದು ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಕೋವಿಡ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಹೊಂದಿರುವುದರ ಬಗ್ಗೆ ಪರಿಶೀಲಿಸಲು ಫೀಲ್ಡಿಗಿಳಿದಿದ್ದರು. ಎಲ್ಲಾ ಅಂಗಡಿ ಮುಂಗಟ್ಟಗಳಿಗೆ ದಾಳಿ ಮಾಡಿದ ನಗರಸಭೆ ಅಧಿಕಾರಿಗಳು ಕೋವಿಡ್ ರಿಪೋರ್ಟ್ ಪರಿಶೀಲಿಸಿದರು.
Advertisement
Advertisement
ಈ ವೇಳೆ ಹತ್ತಕ್ಕೂ ಹೆಚ್ಚು ಅಂಗಡಿಗಳ ಮಾಲೀಕರು ಮತ್ತು ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಸಿರಲಿಲ್ಲ. ಇದರಿಂದ ನಗರಸಭೆ ಆಯುಕ್ತ ರಾಮದಾಸ್ ಯಾವುದೇ ಮುಲಾಜಿಲ್ಲದೆ ಅಂಗಡಿಗಳನ್ನು ಮುಚ್ಚಿಸಿದರು. ಮೆಡಿಕಲ್ ಶಾಪ್‍ಗಳಿಗೂ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದ್ದರಿಂದ ನಗರದಲ್ಲಿ ಎರಡು ಮೆಡಿಕಲ್ ಶಾಪ್‍ಗಳನ್ನು ಮುಚ್ಚಿಸಿದರು. ಇದನ್ನೂ ಓದಿ. ಸೋಂಕಿತನ ಜೇಬಿನಿಂದ ನಗದು ಕದ್ದು ಸಿಕ್ಕಿಬಿದ್ದ ಕೋವಿಡ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿ
Advertisement
ಈ ಸಂದರ್ಭ ಆರ್ನ ಮೆಡಿಕಲ್ ಶಾಪ್‍ನ ಮಾಲೀಕರು ಮತ್ತು ಸಿಬ್ಬಂದಿ ನಗರ ಸಭೆ ಆಯುಕ್ತರ ವಿರುದ್ಧ ಗಲಾಟೆ ಮಾಡಿದರು. ನೀವೇ ನಿಯಮ ಉಲ್ಲಂಘನೆ ಮಾಡುತ್ತೀರಾ, ಈಗ ನೋಡಿದ್ರೆ ಮೆಡಿಕಲ್ ಶಾಪ್ ಮುಚ್ಚಿಸಲು ಬಂದಿದ್ದೀರಾ ಎಂದು ನಗರಸಭೆ ಆಯುಕ್ತ ರಾಮದಾಸ್ ಜೊತೆ ವಾಗ್ವಾದ ನಡೆಸಿದರು. ಇದರಿಂದ ಸಿಟ್ಟಿಗೆದ್ದ ರಾಮದಾಸ್ ಮೆಡಿಕಲ್ ಶಾಪ್ ವಿರುದ್ಧ ಪ್ರಕರಣ ದಾಖಲಿಸುವಂತೆ ನಗರಸಭೆ ಸಿಬ್ಬಂದಿಗೆ ಸೂಚನೆ ನೀಡಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಮದಾಸ್ ನಗರದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಅಂಗಡಿಗಳನ್ನು ಮುಚ್ಚಿಸಿದ್ದೇವೆ. ಲಾಕ್‍ಡೌನ್ ಮುಗಿಯುವವರೆಗೆ ಈ ಅಂಗಡಿಗಳನ್ನು ತೆರೆಯುವುದಕ್ಕೆ ಅವಕಾಶ ಕೊಡುವುದಿಲ್ಲ. ತರಕಾರಿ ವ್ಯಾಪಾರಿಗಳಿಗೂ ಕೆಲವರಿಗೆ ಸೋಂಕು ದೃಢಪಟ್ಟಿದ್ದು, ಅವರು ಇಂದಿನಿಂದ ವ್ಯಾಪಾರ ಮಾಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.