– ಮಾಲ್ ಒಳಗೆ ಇರುವ ಆಸ್ಪತ್ರೆ
ಮುಂಬೈ: ಮಾಲ್ ಒಳಗಿರುವ ಕೋವಿಡ್ ಸೆಂಟರ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ಮುಂಬೈನ ಭಾಂಡುಪ್‍ನ ಆಸ್ಪತ್ರೆಯಲ್ಲಿ ನಡೆದಿದೆ. 6 ಮಂದಿ ಒಳಗೆ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Two casualties have been reported in fire incident. Rescue operation for 76 patients admitted to COVID care hospital is underway. Level-3 or level-4 fire broke out on first floor of a mall at 12.30 AM. Around 23 fire tenders present at the spot: DCP Prashant Kadam #Mumbai pic.twitter.com/lVJ4zMRvX9
— ANI (@ANI) March 25, 2021
Advertisement
ಭಾಂಡುಪ್‍ನ ಡ್ರೀಮ್ ಮಾಲ್‍ನ ಮೂರನೇ ಮಹಡಿಯಲ್ಲಿ ಕೋವಿಡ್ ಕೇರ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆರು ಮಂದಿ ಒಳಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಸಾವು-ನೋವುಗಳ ಸಂಖ್ಯೆಯಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ.
Advertisement
Maharashtra: Fire breaks out at a hospital in Mumbai’s Bhandup; rescue operation on
“Cause of fire is yet to be ascertained. I’ve seen a hospital at mall for the first time. Action to be taken. 70 patients including COVID infected shifted to another hospital,” says Mumbai Mayor pic.twitter.com/sq1K29PVhe
— ANI (@ANI) March 25, 2021
Advertisement
ಬೆಂಕಿ ಕಾಣಿಸಿಕೊಂಡಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಮಾಲ್‍ನ ಒಳಗಡೆ ಆಸ್ಪತ್ರೆ ನಿರ್ಮಿಸಿರುವುದನ್ನು ನಾನು ಇದೇ ಮೊದಲು ಕೇಳಿರುವುದು. ಈ ಕುರಿತಾಗಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಈ ಆಸ್ಪತ್ರೆಯಲ್ಲಿ 76 ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಲ್ಲಿ 73 ಮಂದಿ ಕೋವಿಡ್ ಸೋಂಕಿತರಾಗಿದ್ದರು. ಆಸ್ಪತ್ರೆಯಲ್ಲಿದ್ದವರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ.
Advertisement