ಬೆಂಗಳೂರು: ಇಂದು ನೆಲಮಂಗಲ ತಹಶೀಲ್ದಾರ್ ಮಂಜುನಾಥ್ ಆರೋಗ್ಯಾಧಿಕಾರಿಗಳ ಜೊತೆಗೆ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದರು.
ಎರಡನೇ ಅಲೆಯ ಮಹಾಮಾರಿ ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈ ನಡುವೆ ಜನಸಾಮಾನ್ಯರ ಚಿಕಿತ್ಸೆಗೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಟಿಬೆಟಿಯನ್ ವಸತಿ ಗೃಹದಲ್ಲಿ 120 ಹಾಸಿಗೆಯ ವ್ಯವಸ್ಥೆಯನ್ನ ನೆಲಮಂಗಲ ತಾಲೂಕು ಆಡಳಿತದಿಂದ ಕೊವೀಡ್ ಕೇರ್ ಸೆಂಟರ್ ತೆರೆಯಲಾಗಿತ್ತು. ಈಗಾಗಲೇ ಕೊವೀಡ್ ಕೇರ್ ಸೆಂಟರ್ ನಲ್ಲಿ ಪ್ರತ್ಯೇಕವಾಗಿ ಪುರುಷ ಹಾಗೂ ಮಹಿಳೆಯರಿಗೆ ಕೊಠಡಿ ವ್ಯವಸ್ಥೆಯನ್ನ ಮಾಡಲಾಗಿದೆ.
ಹಳ್ಳಿಗಾಡಿನ ಕೊರೊನ ಸೋಂಕಿತರ ಆರೋಗ್ಯ ವಿಚಾರಿಸಿದ ತಹಶೀಲ್ದಾರ್ ಮಂಜುನಾಥ್, ಕೇರ್ ಸೆಂಟರ್ ನಲ್ಲಿನ ಚಿಕಿತ್ಸೆ, ಶೌಚಾಲಯ, ಸ್ವಚ್ಛತೆ ಹಾಗೂ ಉತ್ತಮ ಗುಣಮಟ್ಟದ ಊಟ ಉಪಚಾರದ ಬಗ್ಗೆ ಸೋಂಕಿತರಿಂದಲೇ ಮಾಹಿತಿ ಪಡೆದರು. ಜೊತೆಗೆ ಸೋಂಕಿತರಿಗೆ ಕೊರೋನ ಜಾಗೃತಿ ಮೂಡಿಸಿ ಆತಂಕ ಪಡದಂತೆ ಧೈರ್ಯ ತುಂಬಿದ್ದಾರೆ.