ಗದಗ: ರಾಜ್ಯದೆಲ್ಲೆಡೆ ಕೋವಿಡ್ ಸೋಂಕಿತರು ಮಾನಸಿಕ ಹಾಗೂ ಭಯದ ಆತಂಕದ ನಡುವೆ ತಮ್ಮ ಉಸಿರು ಚೆಲ್ಲುತ್ತಿದ್ದಾರೆ. ಅವರಲ್ಲಿ ಕೊಂಚ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಜಿಲ್ಲೆ ಮುಂಡರಗಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಸಂಗೀತ ಕಾರ್ಯಕ್ರಮ ಜರುಗಿತು.
ಜಾನಪದ ಕಲಾವಿದ ಗವಿಶಿದ್ದಯ್ಯ ಹಳ್ಳಿಕೇರಿಮಠ ಕಲಾ ಬಳಗದವರು ಸೋಂಕಿತರಿಗೆ ಸಂಗೀತದ ರಸದೌತನ ನೀಡಿದ್ರು. ಜಾನಪದ, ತತ್ವ ಪದ, ಗೀಗೀ ಪದ, ಸಂತ ಶಿಶುನಾಳ ಶರೀಫರ್ ಗೀತೆಗಳನ್ನ ಹಾಡುವ ಮೂಲಕ ಸೋಂಕಿತರಿಗೆ ಮನರಂಜನೆ ನೀಡಲಾಯಿತು.
Advertisement
Advertisement
ಜಾನಪದ ಹಾಡುಗಳಿಗೆ ಧ್ವನಿಗೂಡಿಸಿದ ಕೊರೊನಾ ಸೋಂಕಿತರು, ಹಾಡುಗಳ ತಾಳಕ್ಕೆ ಚಪ್ಪಾಳೆ ಹಾಕುವ ಮೂಲಕ ತಮಗೆ ಖಾಯಿಲೆ ಇದೆ ಅನ್ನೋದನ್ನ ಮರೆತು ಸಂಗೀತದಲ್ಲಿ ಮೈಮರೆತಂತಿತ್ತು. ”ಒಳಿತು ಮಾಡು ಮನುಷ್ಯ ನೀ ಇರೋದು ಮೂರು ದಿವಸ. ಉಸಿರು ನಿಂತ ಮ್ಯಾಲೆ ನಿನ್ನ ಹೆಸರು ಹೇಳುತಾರಾ, ಹೆಣಾ ಅನ್ನುತಾರ” ಎಂಬ ಹಾಡಿಗೆ ಕೆಲವು ಸೋಂಕಿತ ತಮ್ಮ ಜೀವನದ ಅನುಭವ ನೆನಪಿಸಿಕೊಂಡು ಕಣ್ಣೀರಿಟ್ಟರು. ಇದನ್ನೂ ಓದಿ: ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ
Advertisement
ಸಿನಿಮಾ ಹಾಡಿಗಿಂತ ಕೆಲವು ಜಾನಪದ ಹಾಡುಗಳನ್ನು ಕೇಳಿ ಮತ್ತೊಮ್ಮೆ ಹಾಡಿ, ಮತ್ತೊಮ್ಮೆ ಹಾಡಿ ಅಂತ ಸೋಂಕಿತರು ದುಂಬಾಲು ಬಿದ್ದರು. ಕೆಲವು ಸೋಂಕಿತರು ಮತ್ತೊಮ್ಮೆ ಕೇಳಲೆಂದು ತಮ್ಮ ಮೊಬೈಲ್‍ನಲ್ಲಿ ಚಿತ್ರಿಕರಿಸಿಕೊಂಡರು. ಇವರಲ್ಲಿರುವ ಸಂಗೀತದ ಉತ್ಸಾಹ ಕಂಡ ವೈದ್ಯಕೀಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಖುಷಿಪಟ್ಟರು.
Advertisement
ಸೋಂಕಿರಲ್ಲಿರುವ ಮಾನಸಿಕ ಕಿನ್ನಲೆ, ಕಿಳರುಮೆ ನಿಜಕ್ಕೂ ಕಡಿಮೆ ಆದಂತಿದೆ ಎಂದು ಹೆಮ್ಮೆ ಪಡುವಂತಾಯಿತು. ಈ ಕಾರ್ಯಕ್ರಮದಲ್ಲಿ ಮುಂಡರಗಿ ವೈದ್ಯಕೀಯ ಸಿಬ್ಬಂದಿ, ತಹಶೀಲ್ದಾರ್, ತಾ.ಪಂ ಅಧಿಕಾರಿ ಸೇರಿದಂತೆ ಕಂದಾಯ ಇಲಾಖೆ ಅನೇಕ ಸಿಬ್ಬಂದಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಕೊರೊನಾ ಕೇರ್ ಸೆಂಟರ್‌ನಲ್ಲಿ ಸಂಗೀತ ರಸಮಂಜರಿ