– ಬಿಮ್ಸ್ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯತೆಗೆ ವೃದ್ಧ ಬಲಿ
ಬೆಳಗಾವಿ: ಮಹಾಮಾರಿ ಕೊರೊನಾನಿಂದಾಗಿ ಬೆಡ್, ಅಂಬುಲೆನ್ಸ್, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಅನೇಕರು ಸಾವನ್ನಪ್ಪುತ್ತಿರುವ ಅಮಾನವೀಯ ಘಟನೆ ಪ್ರತಿದಿನ ಬೆಳಕಿಗೆ ಬರುತ್ತಿವೆ. ಇದೀಗ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯತೆಗೆ ವೃದ್ಧ ಬಲಿಯಾಗಿದ್ದಾರೆ.
ಕೋವಿಡ್ ಕೇರ್ ಸೆಂಟರಿನಲ್ಲಿ ಕೊರೊನಾ ಸೋಂಕಿತ ವೃದ್ಧ ಬೆತ್ತಲೆಯಾಗಿ ನೆಲದ ಮೇಲೆ ಒದ್ದಾಡಿ ಸಾವನ್ನಪ್ಪಿದ್ದಾರೆ. ಜಿಲ್ಲೆ ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದ 65 ವರ್ಷದ ಸೋಂಕಿತ ಮೃತಪಟ್ಟಿದ್ದಾರೆ.
Advertisement
Advertisement
ಸೋಮವಾರ ಬೆಳಗ್ಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ವೃದ್ಧ ದಾಖಲಾಗಿದ್ದರು. ಬಳಿಕ ಐದು ಗಂಟೆಗಳ ಕಾಲ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಐದು ಗಂಟೆ ಬಳಿಕ ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ವೃದ್ಧನ ಸ್ವ್ಯಾಬ್ ಪಡೆದಿದ್ದರು. ಕೊರೊನಾ ಪಾಸಿಟಿವ್ ಬಂದ ಮೇಲೆ ಕೋವಿಡ್ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಕೋವಿಡ್ ವಾರ್ಡಿನಲ್ಲಿ ಬೆಡ್‍ಗಳು ಭರ್ತಿಯಾದ ಹಿನ್ನೆಲೆಯಲ್ಲಿ ಫ್ಲೋರ್ ಮೇಲೆ ಬೆಡ್ ಹಾಕಿದ್ದರು. ಅದರ ಮೇಲೆ ವೃದ್ಧ ಮಲಗಿದ್ದರು.
Advertisement
ವೃದ್ಧ ಬೆಡ್‍ನಿಂದ ನೆಲದ ಮೇಲೆ ಬಿದ್ದು ಬೆತ್ತಲೆಯಾಗಿ ಒದ್ದಾಡುತ್ತಿದ್ದರೂ ಯಾರೂ ಸಹಾಯಕ್ಕೆ ಬಂದಿಲ್ಲ. ಕೊನೆಗೆ ಹೊಟ್ಟೆ ನೋವಿನಿಂದ 65 ವರ್ಷದ ವೃದ್ಧ ಮೃತಪಟ್ಟಿದ್ದಾರೆ ಎಂದು ಬಿಮ್ಸ್ ಆಡಳಿತ ಮಂಡಳಿ ವಿರುದ್ಧ ವೃದ್ಧನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.