ಉಡುಪಿ: ಕೇರಳ ರಾಜ್ಯದ ಕಾಸರಗೋಡಿನ ಪೋಕ್ಸೋ ಕಾಯ್ದೆಯಡಿಯ ಬಂದಿತ ಆರೋಪಿಯ ಮೃತದೇಹ ಉಡುಪಿಯಲ್ಲಿ ಪತ್ತೆಯಾಗಿದೆ.
ಕೇರಳ ರಾಜ್ಯದ ಕೂಡ್ಲು ಕಾಳ್ಯಾಂಗಾಡ್‍ನ ಮಹೇಶ್ (28) ಪೋಕ್ಸೋ ಕೇಸಿನ ಆರೋಪಿ. ಶೌಚಾಲಯದಲ್ಲಿ ಅಪ್ರಾಪ್ತ ಬಾಲಕಿಯ ವಿಡಿಯೋ ಮಾಡಿದ್ದ ಮಹೇಶ್ ನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ಮಹಜರಿನ ವೇಳೆ ಆತ ಕೇರಳದಲ್ಲಿ ಸಮುದ್ರಕ್ಕೆ ಹಾರಿದ್ದ. ಜುಲೈ 22ರಂದು ಈ ಘಟನೆ ನಡೆದಿದ್ದು, ಇಂದು ಮೃತದೇಹ ಪತ್ತೆಯಾಗಿದೆ.
ಕೇರಳದಿಂದ ತೆಲಿಕೊಂಡು ಬಂದು ಉಡುಪಿಯ ಕೋಟ ಮಣೂರು ಪಡುಕರೆಯ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದ್ದು, ಶವದ ಬಟ್ಟೆ, ಕೈಕೋಳ ಗಮನಿಸಿ ಪೊಲೀಸರು ವ್ಯಕ್ತಿಯ ಚಹರೆ ಪತ್ತೆ ಮಾಡಿದ್ದಾರೆ. ಈ ಸಂಬಂಧ ಕೋಟ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.